ತಾಯಿಯ ಎದೆಹಾಲು ಮಗುವಿಗೆ ಅಮೃತ ಸಮಾನ : ಅಲ್ಕಾ ಇನಾಮದಾರ
ಬೆಳಗಾವಿ, 3: ನವಜಾತ ಶಿಶುವಿಗೆ ನಾಳಿನ ಉತ್ತಮ ಜೀವನ ನೀಡುವದಕ್ಕಾಗಿ ಆರೋಗ್ಯಯುತವಾಗಿರಬೇಕು. ಆರೋಗ್ಯ ಶರೀರಕ್ಕೆ ಮಾತ್ರವಲ್ಲ. ಮನಸ್ಸಿಗೂ ಬೇಕು. ಆದ್ದರಿಂದ ಮಗುವಿನ ಸಮಗ್ರ ಬೆಳವಣಿಗೆಗೆ ತಾಯಿಯ ಎದೆಹಾಲು ಅತ್ಯವಶ್ಯ. ತಾಯಿಯ ಎದೆಹಾಲು ಮಗುವಿಗೆ ಅಮೃತ ಸಮಾನ. ಮಗು ಜನಿಸಿದ ತಕ್ಷಣ ಎದೆ ಹಾಲು ಉಣಿಸಿ, ಭವಿಷ್ಯದಲ್ಲಿ ಆರೋಗ್ಯವಂತ ಮಗುವನ್ನು ನಿಮರ್ಾಣಗೊಳಿಸಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕಾರಿಣಿ ಸದಸ್ಯೆ ಅಲ್ಕಾ ಇನಾಮದಾರ ಅವರಿಂದಿಲ್ಲಿ ಹೇಳಿದರು.
ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಿ. 2 ಅಗಸ್ಟ 2019 ರಂದು ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ಚಿಕ್ಕಮಕ್ಕಳ ವಿಭಾಗವು ಏರ್ಪಡಿಸಿದ್ದ ಸ್ತನಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನೆಯ ಶಾಂತ ವಾತಾವರಣದಲ್ಲಿ ಬೆಳೆಯುವ ಮಗು ಕುಶಾಗ್ರ ಬುದ್ದಿಮತ್ತೆಯಿಂದ ಕೂಡಿರುತ್ತದೆ. ಕೇವಲ ಬಟ್ಟೆ ಬರೆ ಸಾಲದು ಅದಕ್ಕೆ ಒಳ್ಳೆಯ ಆರೋಗ್ಯ ಬೇಕು. ಎದೆಹಾಲು ಉಣಿಸಿದರೆ ಮಗುವಿನ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಸಮಾಜದಲ್ಲಿ ಹೆಣ್ಣು ಗಂಡೆಂಬ ಬೇಧಭಾವ ಮಾಡದೇ ಎಲ್ಲರನ್ನು ಸಮಾನತೆಯಿಂದ ಕಾಣಬೇಕು. ಕಾರ್ಯಸ್ಥಳದ ಒತ್ತಡದ ನಡುವೆ ಮಹಿಳೆಯು ಮಗುವಿನ ಪಾಲನೆ ಮಾಡಬೇಕಾಗುತ್ತದೆ. ಮಗುವಿನ ಭವಿಷ್ಯ ರೂಪಿಸುವಲ್ಲಿ ತಂದೆ ತಾಯಿ ಹಾಗೂ ಮನೆಯ ಸದಸ್ಯರೆಲ್ಲರ ಜವಾಬ್ದಾರಿ ಇರುತ್ತದೆ. ಆದ್ದರಿಂದ ಮನೆಯ ಹಿರಿಯರ ಸಹಕಾರ ಅತ್ಯಗತ್ಯ. ಒಳ್ಳೆಯ ಆಚಾರ ವಿಚಾರ ಆಹಾರ ಸಾಲದು, ಉತ್ತಮ ಸಂಸ್ಕಾರ ಮುಖ್ಯ. ಇದರಿಂದ ಸಮಾಜ ನಿರ್ಮಾಣದಲ್ಲಿ ಮಕ್ಕಳು ತಾವಾಗಿಯೇ ಮುಂದೆ ಬರುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜೆಎನ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಮಾತನಾಡಿ, ಬಾಣಂತಿ ಮಹಿಳೆಗೆ ಸರಕಾರದಿಂದ ಸಕಲ ಸೌಲಬ್ಯ ಲಭಿಸುತ್ತದೆ. ಗಭರ್ಿಣಿ ಹಾಗೂ ಪ್ರಸವದ ನಂತರದಲ್ಲಿ ಮಹಿಳೆಯರು ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಕೆಲವು ತಪ್ಪು ಕಲ್ಪನೆಯಿಂದಾಗಿ ಮಹಿಳೆಯರು ನವಜಾತ ಶಿಶುವಿಗೆ ಎದೆಹಾಲು ಉಣಿಸಲು ಹಿಂದೇಟು ಹಾಕುತ್ತಿದ್ದಾರೆ. ಅದು ತಪ್ಪಬೇಕು.ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಅಮೃತ ಎಂಬ ಹ್ಯುಮನ ಮಿಲ್ಕ (ತಾಯಿ ಎದೆಹಾಲು)ಬ್ಯಾಂಕ ಸ್ಥಾಪಿಸಲಾಗಿದೆ. ಅಲ್ಲಿ ಎದೆಹಾಲನ್ನು ದಾನ ಮಾಡಿ ಎಂದು ಸಲಹೆ ನೀಡಿದರು.
ಕಾಹೆರನ ಕುಲಸಚಿವ ಡಾ. ವಿ.ಡಿ. ಪಾಟೀಲ ಮಾತನಾಡಿದರು. ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿದರ್ೇಶಕರಾದ ಡಾ. ಎಂ.ವಿ. ಜಾಲಿ, ಡಾ. ರೂಪಾ ಬೆಲ್ಲದ, ಡಾ. ಸುಜಾತಾ ಜಾಲಿ, ಡಾ. ಆರ್. ಎಸ್. ಮುಧೋಳ, ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 