ಮುಂದಗೋಡ

ಪಾಳಾ ಗ್ರಾಮದಲ್ಲಿ ಆಕಸ್ಮಿಕ ಅಗ್ನಿ ಅವಘಡ: ಭತ್ತದ ಹುಲ್ಲಿನ ರೋಲರ್ ಪೆಂಡಿಗಳು ಸುಟ್ಟು ಹಾನಿ

ಪಾಳಾ ಗ್ರಾಮದಲ್ಲಿ ಆಕಸ್ಮಿಕ ಅಗ್ನಿ ಅವಘಡ: ಭತ್ತದ ಹುಲ್ಲಿನ ರೋಲರ್ ಪೆಂಡಿಗಳು ಸುಟ್ಟು ಹಾನಿ

ಮುಂಡಗೋಡ 21 : ತಾಲೂಕಿನ ಪಾಳಾ ಗ್ರಾಮದಲ್ಲಿ ಶನಿವಾರ ಸಂಜೆ ಆಕಸ್ಮಿಕವಾಗಿ ಬೆಂಕಿ ತಗುಲಿ ಭಾರೀ ಹಾನಿ ಸಂಭವಿಸಿದೆ. ಗ್ರಾಮದ ರವಿಕುಮಾರ ಗುಡುಗುಡಿ ಅವರಿಗೆ ಸೇರಿದ ಆರು ಟ್ರ್ಯಕ್ಟರ್ಗಳಷ್ಟು ಹುಲ್ಲಿನ ಬಣವೆ ಹಾಗೂ ರವಿ ಚಲವಾದಿ ಅವರಿಗೆ ಸೇರಿದ 170 ಭತ್ತದ ಹುಲ್ಲಿನ ರೋಲರ್ ಪೆಂಡಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಗ್ರಾಮಸ್ಥರು ನಂದಿಸಲು ಪ್ರಯತ್ನಿಸಿದರೂ ಅದು ಹತೋಟಿಗೆ ಬರಲಿಲ್ಲ. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 


ಸುದ್ದಿ ಓದಿ