ಸೌದಿ ಅರೇಬಿಯಾ ಹಾದಿಯಲ್ಲಿ ಓಮನ್.. ಮಹಿಳೆಯರಿಗೆ ಸುವರ್ಣ ಅವಕಾಶ
ಮಸ್ಕಟ್, ಜ 16 ಸೌದಿ ಅರೆಬಿಯಾದಲ್ಲಿ ಇತ್ತೀಚಿಗೆ ಮಹಿಳೆಯರಿಗೆ
ಟ್ಯಾಕ್ಸಿ ಚಾಲಕರಾಗುವ ಅವಕಾಶ ಕಲ್ಪಿಸಿರುವುದು ಗೊತ್ತಿರುವ ವಿಚಾರ. ಈಗ ಸೌದಿ
ಅರೇಬಿಯಾದ ದಾರಿಯಲ್ಲಿ ಮತ್ತೊಂದು ಕೊಲ್ಲಿ ದೇಶ ಒಮನ್ ಮಹಿಳೆಯರ ವಿಷಯದಲ್ಲಿ
ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಒಮನ್ ಕೂಡಾ ಮಹಿಳೆಯರು ಟ್ಯಾಕ್ಸಿ ಓಡಿಸಲು ಅವಕಾಶ ಕಲ್ಪಿಸಿದೆ. ಓಮನ್ ರಾಜಧಾನಿ
ಮಸ್ಕಟ್ ನಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಮಹಿಳೆಯರಿಗೆ ಈ ಅವಕಾಶ
ಕಲ್ಪಿಸಲಾಗುತ್ತಿದೆ ಎಂದು ಸಾರಿಗೆ, ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ
ಹೇಳಿದೆ.
ಜನವರಿ 20 ರಿಂದ ಪ್ರಾಯೋಗಿಕವಾಗಿ ಮಸ್ಕಟ್ ಗವರ್ನರೇಟ್ ವ್ಯಾಪ್ತಿಯಲ್ಲಿ ಮಾತ್ರ ಈ ಸೇವೆಗಳನ್ನು ಪ್ರಾರಂಭಿಸಲಾಗುವುದು. ಇದು ಯಶಸ್ವಿಯಾದರೆ, ಇತರ ಗವರ್ನರೇಟ್‌ಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದೆ. ಒಮನ್ ತೆಗೆದುಕೊಂಡಿರುವ ಈ ನಿರ್ಧಾರ ಆ ದೇಶದ ಮಹಿಳೆಯರ ಪಾಲಿಗೆ ಸುವರ್ಣಾವಕಾಶ ಎಂದೇ ಹೇಳಲಾಗುತ್ತಿದೆ.