ಅಂತರರಾಷ್ಟ್ರೀಯ

ಕೊರೊನಾ; ಅಮೆರಿಕಾದಲ್ಲಿ 75 ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ

ಕೊರೊನಾ; ಅಮೆರಿಕಾದಲ್ಲಿ 75 ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ

ವಾಷಿಂಗ್ಟನ್, ಮೇ 8,ಅಮೆರಿಕಾದಲ್ಲಿ ನೋವಲ್  ಕೋರೊನಾ ವೈರಸ್( ಕೋವಿಡ್ -19)  ಸೋಂಕಿನಿಂದ  ಮೃತಪಟ್ಟವರ ಸಂಖ್ಯೆ  ಗುರುವಾರ 75000 ಗಡಿ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಇತ್ತೀಚಿನ   ದತ್ತಾಂಶದಲ್ಲಿ ತಿಳಿಸಿದೆ.ಗುರುವಾರ ಮಧ್ಯಾಹ್ನದವರೆಗೆ  ಅಮೇರಿಕಾದಲ್ಲಿ ಕೋವಿಡ್ ಸೋಂಕಿನಿಂದ ಒಟ್ಟು 75,447 ಮಂದಿ ಮೃತಪಟ್ಟಿದ್ದು,   1,252,911 ಸೋಂಕು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ.ಅಮೆರಿಕಾದ ನ್ಯೂಯಾರ್ಕ್ ನಗರ  ಸೋಂಕಿನಿಂದ ತೀವ್ರ ಬಾಧಿತಗೊಂಡ ನಗರವಾಗಿದ್ದು,  26,130 ಮಂದಿ ಮೃತಪಟ್ಟಿದ್ದಾರೆ. ನಂತರ ನ್ಯೂಜೆರ್ಸಿ 8,801 ಹಾಗೂ ಮೆಸಾಚ್ಯುಸೆಟ್ಸ್ ನಲ್ಲಿ 4,552  ಮಂದಿ ಸಾವನ್ನಪ್ಪಿದ್ದಾರೆ. ಜಗತ್ತಿನೆಲ್ಲೆಡೆ  ಈವರೆಗೆ  ಒಟ್ಟು   3,833,957 ಮಂದಿ  ಕೊರೊನಾ ಸೋಂಕಿಗೆ ಒಳಗಾಗಿ,  ಸುಮಾರು 268,877 ಮಂದಿ ಮೃತಪಟ್ಟಿದ್ದಾರೆ  ಎಂದು  ವಿಶ್ವವಿದ್ಯಾಲಯ ಅಂಕಿ ಅಂಶ ನೀಡಿದೆ ವಿಶ್ವದಲ್ಲಿ  ಅಮೆರಿಕಾ  ಕೊರೊನಾ ಸೋಂಕಿನಿಂದ ತೀವ್ರ ಬಾಧಿತಗೊಂಡ ದೇಶವಾಗಿದ್ದು ನಂತರ ಸ್ಥಾನದಲ್ಲಿ ಬ್ರಿಟನ್ ಹಾಗೂ ಇಟಲಿ ದೇಶಗಳಲ್ಲಿ   ಕ್ರಮವಾಗಿ 30,689 ಹಾಗೂ 29,958 ಮಂದಿ ಮೃತಪಟ್ಟಿದ್ದಾರೆ.

ಸುದ್ದಿ ಓದಿ