ಯಡೂರು ಸಂಸ್ಕೃತ ಪಾಠಶಾಲೆಗೆ ಅತ್ಯುತ್ತಮ ಪ್ರಶಸ್ತಿ
ಮಾಂಜರಿ 02: ಶ್ರೀಶೈಲ ಪೀಠದ ಜಗದ್ಗುರುಗಳಾದ ಹಾಗೂ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರ ದೇವಸ್ಥಾನ ಮತ್ತು ಕಾಡಸಿದ್ದೇಶ್ವರ ಸಂಸ್ಥಾನ ಮಠದ ಧರ್ಮಾಧಿಕಾರಿಗಳಾದ ಡಾ ಚನ್ನ ಸಿದ್ದರಾಮ ಪಂಡಿತರಾದ ಶಿವಾಚಾರ್ಯ ಮಹಾಸ್ವಾಮಿಜಿಗಳ ಮಾರ್ಗದರ್ಶನದಲ್ಲಿ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದಲ್ಲಿ ನಡೆಯುತ್ತಿರುವ ಪರಮಪೂಜ್ಯ ಸಿದ್ದಲಿಂಗ ಶಿವಾಚಾರ್ಯ ವೇದ ಆಗಮ ಸಂಸ್ಕೃತ ಪಾಠಶಾಲೆಯ ಸಂಸ್ಕೃತ ಭಾಷಾ ಸೇವೆ ಪರಿಗಣಿಸಿ ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದಿಂದ ಬೆಳಗಾವಿ ವಿಭಾಗದ 'ಅತ್ಯುತ್ತಮ ಸಂಸ್ಕೃತ ಪಾಠ ಶಾಲೆ' ಪ್ರಶಸ್ತಿ ನೀಡಿದೆ. ಗೌರವಿಸಲಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸ್ನಾತಕಪೂರ್ವ ದೀಕ್ಷಾಂತ ಸಮಾರೋಹದಲ್ಲಿ ಶಾಲೆ ಪರವಾಗಿ ಸಂಸ್ಕೃತ ವೇದ ಆಗಮ್ ಪಾಠ ಶಾಲೆಗಳ ಮುಖ್ಯ ಗುರುಗಳಾದ ಶ್ರೀಶೈಲ್ ಹಿರೇಮಠ ಗುರೂಜಿಗಳು ಸದರಿ ಪ್ರಶಸ್ತಿ ಸ್ವೀಕರಿಸಿದರು ತುಮಕೂರು ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ಅಹಲ್ಯಾ ಪ್ರಶಸ್ತಿ ಪ್ರದಾನ ಮಾಡಿದರು.