ನ 21ರಿಂದ 25ರ ವರೆಗೆ "ಕುಮಟಾ ವೈಭವ" ಕಾರ್ಯಕ್ರಮ
ಲೋಕದರ್ಶನ ವರದಿ
ಕುಮಟಾ,20 : ಪಟ್ಟಣದ ಮಣಕಿ ಮೈದಾನದಲ್ಲಿ ನ 21ರಿಂದ 25ರ ವರೆಗೆ ನಡೆಯಲಿರುವ "ಕುಮಟಾ ವೈಭವ" ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಅವರು ಉದ್ಘಾಟಿಸಲಿದ್ದಾರೆ ಎಂದು ಕುಮಟಾ ವೈಭವ ಸಮಿತಿಯ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ತಿಳಿಸಿದರು.
ಅವರು ರವಿವಾರ ಕುಮಟಾ ವೈಭವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಐದು ದಿನಗಳ ಕಾಲ ವಿಜೃಂಭನೆಯಿಂದ ನಡೆಯುವ "ಕುಮಟಾ ವೈಭವ" ಕಾರ್ಯಕ್ರಮದ ಸಂಪೂರ್ಣ ವಿವರ ನೀಡಿ, ನ 21 ರಂದು ಕುಮಟಾ ವೈಭವದ ಮಳಿಗೆ ಉದ್ಘಾಟನೆಯನ್ನು ಶಾಸಕ ದಿನಕರ ಶೆಟ್ಟಿ ನೆರವೇರಿಸಲಿದ್ದಾರೆ. ವೇದಿಕೆ ಉದ್ಘಾಟನೆ ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಮತ್ತು ಸಾಧಕರ ಸನ್ಮಾನವನ್ನು ಮಾಜಿ ಸಚಿವ ರುದ್ರಪ್ಪ ಲಮಾಣಿ ನಡೆಸಿಕೊಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಗಾಯಕ ವಿಜಯ ಪ್ರಕಾಶ ಮತ್ತು ಅನುರಾಧ ಶೆಟ್ಟಿ ತಂಡದಿಂದ "ಹಾಡು ಸಂತೋಷಕ್ಕೆ" ಎಂಬ ರಸ ಮಂಜರಿ ನಡೆಯಲಿದೆ. ನ 22ರ ಸಭಾ ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಎಸ್ ಎಸ್ ನಕುಲ, ಮಾಜಿ ಸಚಿವ ಶಿವಾನಂದ ನಾಯ್ಕ ಇತರರು ಪಾಲ್ಗೊಳ್ಳಲಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಕೋಗಿಲೆ, ಮಜಾ ಟಾಕೀಸ್, ಮಜಾ ಭಾರತ, ಪಾಪಾ ಪಾಂಡು, ಮಗಳು ಜಾನಕಿ, ರಾಜಾ-ರಾಣಿ, ಬಿಗ್ ಬಾಸ್ನ ಕಲಾವಿದರಿಂದ "ಸಾಗರ ಸಂಭ್ರಮ" ಕಾರ್ಯಕ್ರಮ ನಡೆಯಲಿದೆ. ನ 23ರ ಸಭಾ ಕಾರ್ಯಕ್ರಮದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ ಸಿ ಎಂ ಉದಾಸಿ, ಶಾಸಕ ಸುನೀಲ ನಾಯ್ಕ, ಸೂರಜ ನಾಯ್ಕ ಸೋನಿ ಪಾಲ್ಗೊಳ್ಳಲಿದ್ದಾರೆ. ಖ್ಯಾತ ಗಾಯಕಿ ಶಮಿತಾ ಮಲ್ನಾಡ್, ಚೇತನ, ಶ್ವೇತಾ ಪ್ರಭು ಅವರ ತಂಡದಿಂದ "ಸಂಗೀತ ಸಂಜೆ" ಕಾರ್ಯಕ್ರಮ ನಡೆಯಲಿದೆ. ನ 24ರಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಮಾಜಿ ಸಚಿವ ಕುಮಾರ ಬಂಗಾರಪ್ಪ, ಮಾಜಿ ಎಂಎಲ್ಸಿ ಮೋಹನ ಲಿಂಬಿಕಾಯಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಮಟ್ಟದ ಡ್ಯಾನ್ಸ್ ಸ್ಪಧರ್ೆ "ಡ್ಯಾನ್ಸ್ ಧಮಾಕಾ" ನಡೆಯಲಿದ್ದು, ನಿಣರ್ಾಯಕರಾಗಿ ಅಂತರಾಷ್ಟ್ರೀಯ ನೃತ್ಯಪಟು ಸಂಕೇತ ಗಾಂವ್ಕರ್ ಮತ್ತು ಖ್ಯಾತ ಕೋರಿಯೋಗ್ರಾಫರ್ ಮಂಜು ಮಾಸ್ಟರ್ ಆಗಮಿಸಲಿದ್ದಾರೆ. ನ 25ರ ಸಮಾರೋಪ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ, ಶಾಸಕ ಎಚ್ ಕೆ ಪಾಟೀಲ್, ಮಾಜಿ ಶಾಸಕಿ ಶಾರದಾ ಶೆಟ್ಟಿ, ಎಂಎಲ್ಸಿ ಎಸ್ ಎಲ್ ಘೋಟ್ನೇಕರ್, ಜಿಪಂ ಸಿಇಒ ಎಂ ರೋಷನ್ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ದೂರದರ್ಶನ ಚಂದನ ವಾಹಿನಿಯಿಂದ "ಮಧುರ ಮಧುರವೀ ಮಂಜುಳಗಾನ" ಕಾರ್ಯಕ್ರಮ ನಡೆಯಲಿದೆ ಎಂದರು.
ತಾಂಡವ ಕಲಾನಿಕೇತನದ ಅಧ್ಯಕ್ಷ ಮಂಜುನಾಥ ನಾಯ್ಕ ಹಾಗೂ ಕುಮಟಾ ವೈಭವ ಸಮಿತಿಯ ಸವರ್ಾಧ್ಯಕ್ಷ ಎಂ ಜಿ ಭಟ್ ಮಾತನಾಡಿ, ನ 23ರಿಂದ 25ರ ವರೆಗೆ ಪುರ ಭವನದಲ್ಲಿ ಪ್ರತಿದಿನ ಬೆಳಗ್ಗೆ 10.30ರಿಂದ ಚಲನಚಿತ್ರೋತ್ಸವ ನಡೆಯಲಿದೆ. ಈ ಕಾರ್ಯಕ್ರಮದ ಸಂಪೂರ್ಣ ಜವಬ್ದಾರಿಯನ್ನು ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕಕರ್ಿಕೋಡಿ ಅವರು ನಿರ್ವಹಿಸಲಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ 6 ಚಲನಚಿತ್ರಗಳ ಜೊತೆಗೆ ಜಿಲ್ಲೆಯ ಸ್ಥಳೀಯ ಕಲಾವಿದರು ಹೊರತಂದಂತಹ ಆಯ್ದ ಕಿರು ಚಿತ್ರಗಳ ಪ್ರದರ್ಶನ ಕೂಡ ನಡೆಯಲಿದೆ. ಅಲ್ಲದೇ ಉತ್ತಮ ಕಿರು ಚಿತ್ರಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಿದ್ದೇವೆ. ವಿವಿಧ ಸೇವಾ ಕಾರ್ಯಕ್ರಮಗಳ ಜೊತೆಗೆ ವಿವಿಧ ಆಹಾರ ಮಳಿಗೆಗಳು, ವಸ್ತು ಪ್ರದರ್ಶನಗಳು, ಅಮ್ಯೂಸಮೆಂಟ್ ಪಾಕರ್್ ವೈಭವಕ್ಕೆ ಮೆರಗು ನೀಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಮಟಾ ವೈಭವ ಸಮಿತಿಯ ಪ್ರಮುಖರಾದ ಕೃಷ್ಣಾನಂದ ಭಟ್, ಮಹೇಶ ನಾಯ್ಕ ವನ್ನಳ್ಳಿ, ನರಸಿಂಹ ಭಟ್ ಕಡತೋಕ, ಅರುಣ ನಾಯ್ಕ ಹಳದಿಪುರ, ಜಯಾ ಶೇಟ್, ರವಿ ಶೇಟ್, ಗಣೇಶ ನಾಯ್ಕ ಹೊದ್ಕೆ, ಸೂರಜ ಶೇಟ್, ಆದಿತ್ಯ ಶೇಟ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.