ಅಂತರರಾಷ್ಟ್ರೀಯ

ಕೊವಿಡ್‍-19 ಪರಿಣಾಮ: ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆ 7.9 ಟ್ರಿಲಿಯನ್‍ ಡಾಲರ್‍ ನಷ್ಟು ಕುಸಿತ ಅಂದಾಜು

ಕೊವಿಡ್‍-19 ಪರಿಣಾಮ: ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆ 7.9 ಟ್ರಿಲಿಯನ್‍ ಡಾಲರ್‍ ನಷ್ಟು ಕುಸಿತ ಅಂದಾಜು

ವಾಷಿಂಗ್ಟನ್, ಜೂನ್ 2 (ಕ್ಸಿನ್ಹುವಾ) ಕೊವಿಡ್‍-19 ಸಾಂಕ್ರಾಮಿಕ ರೋಗದ ಪರಿಣಾಮದಿಂದ ಮುಂದಿನ ದಶಕದಲ್ಲಿ ಅಮೆರಿಕ ಆರ್ಥಿಕತೆಯ ಗಾತ್ರ 7.9 ಟ್ರಿಲಿಯನ್ ಡಾಲರ್ ನಷ್ಟು ಕುಸಿತ ಕಾಣಲಿದೆ ಎಂದು ಸಿಬಿಒ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಅಂದಾಜಿಸಲಾಗಿದೆ. 2020 ರಿಂದ 2030 ರವರೆಗೆ ಅಮೆರಿಕದಲ್ಲಿ ಕೊವಿಡ್‍-19ಸಾಂಕ್ರಾಮಿಕ ರೋಗದಿಂದಾಗಿ ಸಂಚಿತ ನೈಜ ಉತ್ಪಾದನೆ ಜನವರಿಯಲ್ಲಿ ನಿರೀಕ್ಷಿಸಿದ್ದಕ್ಕಿಂತ 7.9 ಟ್ರಿಲಿಯನ್ ಡಾಲರ್‍ ಗಳಷ್ಟು ಕುಸಿಯಲಿದೆ. ಅದು ಮುಂದಿನ ದಶಕದಲ್ಲಿ ಸಂಚಿತ ನೈಜ ಒಟ್ಟು ದೇಶೀಯ ಉತ್ಪನ್ನದಲ್ಲಿ (ಜಿಡಿಪಿ) ಶೇ 3 ಕುಸಿತವನ್ನು ಇದು ಬಿಂಬಿಸುತ್ತದೆ ಎಂದು ಸಿಬಿಒ ನಿರ್ದೇಶಕ ಫಿಲಿಪ್ ಸ್ವಾಗಲ್ ಅವರು ಸೆನೆಟ್ ನ ಅಲ್ಪಸಂಖ್ಯಾತ ಮುಖಂಡ ಚಾರ್ಲ್ಸ್ ಶುಮರ್ ಅವರ ಮನವಿಗೆ ಪ್ರತಿಕ್ರಿಯಿಸಿ ತಿಳಿಸಿದ್ದಾರೆ.  ವಾಣಿಜ್ಯ-ವಹಿವಾಟು ಸ್ಥಗಿತ ಮತ್ತು ಸಾಮಾಜಿಕ ಅಂತರದ ಕ್ರಮಗಳಿಂದ ಗ್ರಾಹಕರು ವೆಚ್ಚ ಮಾಡುವುದನ್ನು ಕಡಿಮೆಗೊಳಿಸುವ ಸಾಧ್ಯತೆ ಇದೆ. ಅಲ್ಲದೆ,  ಇತ್ತೀಚಿನ ಇಂಧನ ದರಗಳ ಕುಸಿತವು ಇಂಧನ ಕ್ಷೇತ್ರದಲ್ಲಿ ಅಮೆರಿಕ ಹೂಡಿಕೆಯನ್ನು ಹೆಚ್ಚು ಪ್ರಮಾಣದಲ್ಲಿ ಕಡಿಮೆಗೊಳಿಸುತ್ತದೆ ಎಂದು ವರದಿ ಹೇಳಿದೆ.  

ಸುದ್ದಿ ಓದಿ