ಪರಶುರಾಮ ಹಾದಿಮನಿಗೆ ವರ್ಷದ ಕನ್ನಡಿಗ ಪ್ರಶಸ್ತಿ
ಬೀಳಗಿ 23: ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಉದಯೋನ್ಮುಖ ಚಿತ್ರಕಲಾವಿದ ಪರಶುರಾಮ ಹಾದಿಮನಿ ಅವರ ಕಲೆ, ಸಾಹಿತ್ಯ, ಸಂಘಟನೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಚಿತ್ರಸಂತೆ ಸಂಘಟನೆಯ ವತಿಯಿಂದ ‘ವರ್ಷದ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಂಗಳೂರಿನಲ್ಲಿ ನಡೆದ ‘ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ನಿಮ್ಮ ವಿಶಿಷ್ಟ ಸಾಧನೆಗೆ ವಿಶೇಷ ಗೌರವ’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಲನಚಿತ್ರ ನಟಿ ಶ್ವೇತಾ ಶ್ರೀವಾಸ್ತವ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಚಿತ್ರಸಂತೆ ಸಂಘಟನೆಯ ಅಧ್ಯಕ್ಷ ಗೀರೀಶ ಅವರು ಪರಶುರಾಮ ಹಾದಿಮನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ವಿಜಯ ಮಹಾಂತೇಶ, ಪ್ರಾಚಾರ್ಯ ಗೌರೀಶ ವಿ. ಗೌಡ, ರಂಜಿತಾ, ಸುರೇಶ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.