$40 ಶತಕೋಟಿ ಉಕ್ರೇನ್ ಹಣಕಾಸು ನೆರವು ಮಸೂದೆ ಅಮೆರಿಕದಲ್ಲಿ ಅಂಗೀಕಾರ
ವಾಷಿಂಗ್ಟನ್: ಮೇ 11: ಅಮೆರಿಕ ಸಂಸತ್ತಿನ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಉಕ್ರೇನ್‌ಗೆ ಸುಮಾರು 40 ಬಿಲಿಯನ್ ಡಾಲರ್ ಮೌಲ್ಯದ ಉಕ್ರೇನ್ ನಿಧಿ ಮಸೂದೆಯನ್ನು ಅಂಗೀಕರಿಸಿದೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು $ 33 ಶತಕೋಟಿ ನೆರವು ಪ್ಯಾಕೇಜ್‌ಗೆ ಮನವಿ ಮಾಡಿದ ನಂತರ ಇಂದು ಮಸೂದೆಯನ್ನು ಅಂಗೀಕರಿಸಲಾಯಿತು. ಸದನವು ಮಸೂದೆಯ ಪರವಾಗಿ 368 ಮತಗಳು ಮತ್ತು ವಿರುದ್ಧವಾಗಿ 57 ಮತಗಳು ಬಿದ್ದವು, ಇದಾದ ಬಳಿಕ ಹೆಚ್ಚುವರಿ ಉಕ್ರೇನ್ ಪೂರಕ ವಿನಿಯೋಗ ಕಾಯಿದೆ-2022 ಅನ್ನು ಕಾನೂನಾಗಿ ಜಾರಿಗೊಳಿಸಲಾಯಿತು.
ಮಸೂದೆಯನ್ನು ಅಂಗೀಕರಿಸಿದ ನಂತರ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು “ಈ ಪ್ಯಾಕೇಜ್ ಉಕ್ರೇನ್ ತನ್ನ ರಾಷ್ಟ್ರಕ್ಕೆ ಮಾತ್ರವಲ್ಲದೆ ಜಗತ್ತಿಗೆ ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ಇದರ ನಂತರ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಅವರು. “ಹಣಕಾಸು ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ಸದನಕ್ಕೆ ಧನ್ಯವಾದ ಅರ್ಪಿಸಿದರು.”
“ನಮ್ಮ ಮಿತ್ರರಾಷ್ಟ್ರಗಳು ಮತ್ತು ಪಾಲುದಾರ ದೇಶಗಳ ಕೊಡುಗೆಗಳೊಂದಿಗೆ ಇಲ್ಲಿಯವರೆಗಿನ ನಮ್ಮ ಸಹಾಯವು ಉಕ್ರೇನ್‌ನ ಜನರು ಕೈವ್‌ಗಾಗಿ ಯುದ್ಧವನ್ನು ಗೆಲ್ಲಲು ಮತ್ತು ಅವರ ಸ್ವಾತಂತ್ರ್ಯವನ್ನು ರಕ್ಷಿಸಲು ಸಹಾಯ ಮಾಡುವಲ್ಲಿ ಪ್ರಮುಖವಾಗಿದೆ” ಎಂದು ಹೇಳಿದರು.
“ಈ ಮಸೂದೆಯಲ್ಲಿ ಸೇರಿಸಲಾದ ಹೆಚ್ಚುವರಿ ಸಂಪನ್ಮೂಲಗಳು ಹೆಚ್ಚು ಫಿರಂಗಿಗಳು, ಶಸ್ತ್ರಸಜ್ಜಿತ ವಾಹನಗಳು ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಕಳುಹಿಸಲು ನಮಗೆ ಅನುಮತಿಸುತ್ತದೆ” ಎಂದು ಹೇಳಿದರು. ಈ ಹಂದೆ ಅಧ್ಯಕ್ಷ ಬಿಡೆನ್ ಈ ಮಸೂದೆಯನ್ನು ಶೀಘ್ರವಾಗಿ ಅಂಗೀಕರಿಸುವಂತೆ ಸದನವನ್ನು ಒತ್ತಾಯಿಸಿದ್ದರು.