ಮುಂದಗೋಡ

ಜಗತ್ತಿಗೆ ರಾಮಾಯಣ ಪರಿಚಯಿಸಿದ ಆದಿಕವಿ "ಶ್ರೀ ಮಹರ್ಷಿ ವಾಲ್ಮೀಕಿ"

ಜಗತ್ತಿಗೆ ರಾಮಾಯಣ ಪರಿಚಯಿಸಿದ ಆದಿಕವಿ "ಶ್ರೀ ಮಹರ್ಷಿ ವಾಲ್ಮೀಕಿ"

ಜಗತ್ತಿಗೆ ರಾಮಾಯಣ ಪರಿಚಯಿಸಿದ ಆದಿಕವಿ "ಶ್ರೀ ಮಹರ್ಷಿ ವಾಲ್ಮೀಕಿ"    

ಮುಂಡಗೋಡ 07: ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಾಜಿ ಶಾಸಕ ವಿ ಎಸ್ ಪಾಟೀಲ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ " ಶ್ರೀ ಮಹರ್ಷಿ ವಾಲ್ಮೀಕಿ" ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿದರು. ಮಾಜಿ ಶಾಸಕ ವಿಎಸ್ ಮಾತನಾಡುತ್ತ ಬಡತನದಲ್ಲಿಹುಟ್ಟಿ ಸಾಧನೆ ಮಾಡಿದ ಮಹರ್ಷಿ ವಾಲ್ಮೀಕಿ ಅವರ ಜಯಂತಿ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಮಾಜಿ ಶಾಸಕ ವಿ. ಎಸ್‌. ಪಾಟೀಲ ಹೇಳಿದರು. ಮಾನ್ಯ ತಹಶೀಲ್ದಾರ ಶಂಕರ್ ಗೌಡಿ ರವರು ಮಹರ್ಷಿ ವಾಲ್ಮೀಕಿ ಬಗ್ಗೆ ಮಾತನಾಡಿದರು. ಪಟ್ಟಣದ ಬಂಕಾಪೂರ ರಸ್ತೆ ಮೂಲಕ ನ್ಯಾಸರ್ಗಿ ರಸ್ತೆಗೆ ಹೊಂದಿಕೊಂಡಿರುವ ಶ್ರೀ ಮಹರ್ಷಿ ವಾಲ್ಮೀಕಿ ಗದ್ದುಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ಪ್ರಾರಂಭಿಸಿ, ಶಿವಾಜಿ ಸರ್ಕಲ್ ಹಾಗೂ ಪಟ್ಟಣ ಪಂಚಾಯಿತಿ ಟೌನ್ ಹಾಲ್ ಹತ್ತಿರ ಮೆರವಣಿಗೆ ಆಗಮಿಸಿ ಮುಕ್ತಾಯಗೊಂಡಿತು. ಬ್ಲೂಮಿಂಗ್ ಬರ್ಡ್‌ ವಿದ್ಯಾರ್ಥಿಗಳು ಪ್ರಾರ್ಥಿಸುವ ಮೂಲಕ ನಾಡಗೀತೆ ಗೀತೆಯನ್ನು ಹಾಡಿದರು. ಈ ಸಂದರ್ಭದಲ್ಲಿ  ತಹಶೀಲ್ದಾರ ಶಂಕರ ಗೌಡಿ ತಾ ಪಂ ಇಒ ಟೀ ವೈ ದಾಸನಕೊಪ್ಪ,ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಸುರೇಶ್ ಕಲ್ಲೋಳ್ಳಿ, ಮೌನೇಶ್ ತಳವಾರ, ಆದಿ ಜಾಂಬವ ಮುಖ್ಯೋಪಾಧ್ಯಾಯ ಎಸ್ ಡಿ ಮುಡೆಣ್ಣನವರ, ಎನ್ ಡಿ ಕಿತ್ತೂರ, ಚಿದಾನಂದ ಹರಿಜನ, ಪ್ರಶಾಂತ್ ಲಕ್ಷಣ ದೇವಗೇರಿ ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ