ರಾಷ್ಟ್ರೀಯ

"ರಾಜ್ಯಸಭೆ ಚುನಾವಣೆ: ನತರಾಜನ್ ನಾಮಪತ್ರ ತಿರಸ್ಕಾರ ‘ಸೀಟ್ ಕಳ್ಳತನ’ ಎಂದ ಕಾಂಗ್ರೆಸ್"

"ರಾಜ್ಯಸಭೆ ಚುನಾವಣೆ: ನತರಾಜನ್ ನಾಮಪತ್ರ ತಿರಸ್ಕಾರ ‘ಸೀಟ್ ಕಳ್ಳತನ’ ಎಂದ ಕಾಂಗ್ರೆಸ್"

ನವದೆಹಲಿ, ಜೂನ್ 12 : ಮಧ್ಯಪ್ರದೇಶದಲ್ಲಿ ಅಗತ್ಯ ಸಂಖ್ಯಾಬಲವಿಲ್ಲದಿದ್ದರೂ ಬಿಜೆಪಿಗೆ ಮೂರನೇ ರಾಜ್ಯಸಭಾ ಸ್ಥಾನ ಗೆಲ್ಲಿಸಲು ಬಿಜೆಪಿ ಮತ್ತು ಚುನಾವಣಾ ಆಯೋಗ (ಇಸಿಐ) ಕೈಜೋಡಿಸಿದ್ದವೆಂದು ಕಾಂಗ್ರೆಸ್ ಆರೋಪಿಸಿದೆ.

ಪಕ್ಷದ ಹೇಳಿಕೆಯ ಪ್ರಕಾರ, ಹಿರಿಯ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರವನ್ನು ಹೈದರಾಬಾದ್‌ನಲ್ಲಿನ ಆರೋಪಿತ ಪ್ರಕರಣದ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂಬ ಕಾರಣ ನೀಡಿ ಅನ್ಯಾಯವಾಗಿ ತಿರಸ್ಕರಿಸಲಾಗಿದೆ. ಆದರೆ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಬಾಕಿ ಇಲ್ಲ ಹಾಗೂ ಉಲ್ಲೇಖಿಸಲಾದ ಕಾನೂನು ಪ್ರಕ್ರಿಯೆ ನಾಮಪತ್ರದಲ್ಲಿ ಕಡ್ಡಾಯವಾಗಿ ತಿಳಿಸಬೇಕಾದ ಪ್ರಕರಣದ ವ್ಯಾಪ್ತಿಗೆ ಬರುವುದಿಲ್ಲ ಎಂದು ಕಾಂಗ್ರೆಸ್ ವಾದಿಸಿದೆ.

ಬಿಜೆಪಿಗೆ ಮೂರನೇ ಸ್ಥಾನ ಗೆಲ್ಲಲು ಬೇಕಾದ ಸಂಖ್ಯಾಬಲ ಇರದ ಕಾರಣ, ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನ ವಿಫಲವಾದ ಬಳಿಕ ನಟರಾಜನ್ ಅವರ ನಾಮಪತ್ರವನ್ನು ತಿರಸ್ಕರಿಸುವ ಸಂಚು ರೂಪಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಇದೇ ವೇಳೆ, ಜಾರ್ಖಂಡ್‌ನ ರಾಜ್ಯಸಭಾ ಅಭ್ಯರ್ಥಿ ಪರಿಮಲ್ ನಾಥ್ವಾನಿ ಅವರ ಪ್ರಮಾಣಪತ್ರದಲ್ಲಿ ಕೆಲವು ವ್ಯತ್ಯಾಸಗಳಿದ್ದರೂ ಅವರ ನಾಮಪತ್ರವನ್ನು ಸ್ವೀಕರಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ನಾಥ್ವಾನಿಗೆ ಸ್ಪಷ್ಟೀಕರಣ ನೀಡಲು ಹಾಗೂ ದೋಷಗಳನ್ನು ಸರಿಪಡಿಸಲು ಅವಕಾಶ ನೀಡಲಾಗಿದ್ದರೆ, ನಟರಾಜನ್ ಅವರಿಗೆ ಅಂತಹ ಅವಕಾಶ ನಿರಾಕರಿಸಲಾಗಿದೆ ಎಂದು ಪಕ್ಷ ಆರೋಪಿಸಿದೆ.

ಈ ಘಟನೆನ್ನು “ಸೀಟ್ ಕಳ್ಳತನ” ಎಂದು ಬಣ್ಣಿಸಿದ ಕಾಂಗ್ರೆಸ್, ಚುನಾವಣಾ ಫಲಿತಾಂಶವನ್ನು ಪ್ರಭಾವಿಸಲು ಬಿಜೆಪಿ ಮತ್ತು ಇಸಿಐ ಒಟ್ಟಾಗಿ ಕಾರ್ಯನಿರ್ವಹಿಸಿವೆ ಎಂದು ಆರೋಪಿಸಿದೆ.

ಸುದ್ದಿ ಓದಿ