‘ಶಿಕ್ಷಣದಲ್ಲಿ ಸಹಪಠ್ಯ ಚಟುವಟಿಕೆ ಮಹತ್ವ’ ಕಾರ್ಯಕ್ರಮ
‘Importance of Co-curricular Activities in Education’ program
ಲೋಕದರ್ಶನ ವರದಿ
ಧಾರವಾಡ 24: ಸಹಪಠ್ಯದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಬದುಕುವ ಕಲೆ ಕರಗತವಾಗುವುದು. ಸಹಜೀವನ ಹಾಗೂ ಸಹಬಾಳ್ವೆ, ಶಿಸ್ತು, ಶಾಲಾಭಿಮಾನ ಮುಂತಾದ ಉದಾತ್ತ ಮೂಲಗಳನ್ನು ಸಹಪಠ್ಯ ಚಟುವಟಿಕೆಗಳು ಕಲಿಸುತ್ತವೆ ಎಂದು ಹುಬ್ಬಳ್ಳಿಯ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ರವೀಂದ್ರನಾಥ ಬಿ. ದಂಡಿನ ಅಭಿಪ್ರಾಯಪಟ್ಟರು
ಅವರು ಹುಬ್ಬಳ್ಳಿಯ ವಿಜಯನಗರ ಪದವಿ ಪೂರ್ವ ಕಾಲೇಜಿನಲ್ಲಿ ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಆಯೋಜಿಸಿದ್ದ ‘ಶಿಕ್ಷಣದಲ್ಲಿ ಸಹಪಠ್ಯ ಚಟುವಟಿಕೆ ಮಹತ್ವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ಆದರ್ಶ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ನಂದೀಶ ಕಾಖಂಡಕಿ ಸಹಪಠ್ಯಗಳ ಮಹತ್ವ ಕುರಿತು ಉಪನ್ಯಾಸ ನೀಡಿ, ಸಹಪಠ್ಯ ಚಟುವಟಿಕೆಗಳನ್ನು ಎಂದೂ ಪಠ್ಯೇತರ ಎಂದು ಭಾವಿಸಕೂಡದು. ಅವು ಪಠ್ಯದೊಂದಿಗೆ ನಿರಂತರವಾಗಿ ಶಾಲೆಯಲ್ಲಿ ಜರುಗುತ್ತಿರುತ್ತವೆ. ಕಲಿಕೆ ಹರ್ಷದಾಯಕವಾಗಲು ಸಹಪಠ್ಯ ಬೇಕೇ ಬೇಕು. ಸಹಪಠ್ಯದಿಂದ ವಿದ್ಯಾರ್ಥಿಗಳು ನಾಯಕತ್ವದ ಗುಣ, ಸಹಕಾರ, ನೈತಿಕ ಮೌಲ್ಯ, ಪೌರತ್ವ ಮೌಲ್ಯ, ಸಾಮಾಜಿಕ ಮೌಲ್ಯಗಳನ್ನು ಕಲಿಯಲು ಸಾಧ್ಯ ಎಂದು ಹೇಳಿದರು
ಕವಿವ ಸಂಘದ ಕೋಶಾಧ್ಯಕ್ಷ ಸತೀಶ ತುರಮರಿ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ, ಸಮತೋಲನ ವ್ಯಕ್ತಿತ್ವ, ಉತ್ತಮ ಸಂಸ್ಕಾರ ಹೊಂದಲು ಸಹ ಪಠ್ಯ ಚಟುವಟಿಕೆಗಳು ಪೂರಕವಾಗಿವೆ ಎಂದು ಹೇಳಿದರು.
ಹುಬ್ಬಳ್ಳಿಯ ವಿಜಯನಗರ ಪದವಿಪೂರ್ವ ಮಹಾವಿದ್ಯಾಲಯದ ಸಂದೀಪ ಬೂದಿಹಾಳ ಅಧ್ಯಕ್ಷತೆ ವಹಿಸಿದ್ದರು
ಡಿ.ಜಿ ಹುಗ್ಗಿ ಸ್ವಾಗತಿಸಿದರು. ಡಾ. ಎ.ಎಸ್. ಗಡಾದ ನಿರೂಪಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎ. ನಾಯ್ಕರ ವಂದಿಸಿದರು. ಉಪನ್ಯಾಸಕರಾದ ಅಶೋಕ ಚಂಚಿ, ಎನ್.ಡಿ. ಹಾದಿಮನಿ, ಎಸ್.ಬಿ. ಮಾಸಗೊನೆ, ಪಾರ್ವತಿ ಕುಲ್ಲೊಳ್ಳಿ ಸೇರಿದಂತೆ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 