ಬಸವ ಕೇಂದ್ರದ ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2026-2027 ಪ್ರಾರಂಭೋತ್ಸವ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮ
Commencement ceremony and computer lab inauguration program for the academic year 2026-2027 at V M K
ಲೋಕದರ್ಶನ ವರದಿ
ಹುಬ್ಬಳ್ಳಿ 02: ಗೋಕುಲ ರಸ್ತೆ, ಮುರಾರ್ಜಿನಗರ 2ನೇ ಹಂತ, ಬಸವ ಕೇಂದ್ರದ ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ಶೈಕ್ಷಣಿಕ ವರ್ಷ 2026-2027 ಪ್ರಾರಂಭೋತ್ಸವ ಮತ್ತು ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಸವ ಸಂಸ್ಕೃತಿ ಶಾಲೆಯ ಸಮಿತಿಯ ಸದಸ್ಯರು ಹಾಗೂ ಶಿಕ್ಷಕರು ಮಕ್ಕಳನ್ನು ಪುಷ್ಾರೆ್ಪಣ ಗೈದು, ಸಿಹಿ ಪದಾರ್ಥ ನೀಡಿ ಹೃದಯ ಸ್ಪರ್ಶಿ ಯಾಗಿ, ಪ್ರೀತಿ, ಮಮತೆ, ಕರುಣೆ, ವಾಸ್ತಲ್ಯ, ಸಂತೋಷ, ಸಡಗರ , ಉತ್ಸಾಹ ದಿಂದ ಸ್ವಾಗತಿಸಲಾಯಿತು. ಬಸವಾಭಿಮಾನಿಗಳಿಂದ ದಾಸೋಹ ರೂಪದಲ್ಲಿ ಪಡೆದ ಕಂಪ್ಯೂಟರ್ ಗಳನ್ನು ಒಂದಡೆ ಸೇರಿಸಿ ಕಂಪ್ಯೂಟರ್ ಲ್ಯಾಬ್ ನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಾರೆ್ಪಣ ಮಾಡುವ ಮೂಲಕ ಉದ್ಘಾಟಿಸಲಾಯಿತು. ಬಸವ ಕೇಂದ್ರದ ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯ ಸಮಿತಿಯ ಅಧ್ಯಕ್ಷರು, ದಾಸೋಹಿಗಳಾದ ಎಸ್.ವಿ ಕೊಟಗಿ, ಕಾರ್ಯದರ್ಶಿಗಳು, ನಿವೃತ್ತ ಪ್ರಾಧ್ಯಾಪಕ ಡಾ. ಪ್ರಕಾಶ್ ಮುನ್ನೊಳ್ಳಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಶಾಲೆಯ ಶಿಕ್ಷಕಿಯರಾದ ಶಶಿಕಲಾ ವಾಲಿ, ಮಾಲಾ ರಮೇಶ್, ಮಧು ಕಂಠಿ, ನೇಹಾ ಕಂಠಿ, ರೋಹಿಣಿ, ಶ್ರುತಿ ಇಬ್ರಾಹಿಂಪುರ , ಪ್ರೀತಿ ಪಾಡಾ, ಈಶ್ವರಿ ಬೆಸ್ತ, ಸುಜಾತ ಹಕ್ಕಲ್, ಯಶೋಧ ಗಾಯಕ್ವಾಡ್, ಪ್ರಿಯಾ ಸಂಕನಗೌಡರ, ಆರತಿ ಜಮ್ಯಾಲ್, ಶಾಲೆಯ ಮಕ್ಕಳು, ಪಾಲಕರು, ಮುಂತಾದವರು ಭಾಗವಹಿಸಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 