ಮೂಡಲಗಿ

ನಿಜ ಮೌಲ್ಯಗಳನ್ನು ಸಾರಿದ ದಾರ್ಶನಿಕ ವೇಮನರು: ಗುಜಗೊಂಡ

ನಿಜ ಮೌಲ್ಯಗಳನ್ನು ಸಾರಿದ ದಾರ್ಶನಿಕ ವೇಮನರು: ಗುಜಗೊಂಡ

ಮೂಡಲಗಿ 21: ಮೂಲತಾ ರಾಜಕುಮಾರನಾಗಿದ್ದ ವೇಮನ ಬದುಕಿನ ಎಲ್ಲ ಐಹಿಕ ಸುಖ ಭೋಗಗಳನ್ನು ತೇಜಿಸಿ ನಿಜವಾದ ಪಾರಮಾರ್ಥವನ್ನು ಹೊಂದಬೇಕೆಂಬ ಉತ್ತಕೃಷ್ಟ  ಬಯಕೆಯಿಂದ ಮಹಾನ್ ಸಂತನಾಗಿ ಪರಿವರ್ತನಾಗಿ ಲೋಕ ಕಲ್ಯಾಣಕ್ಕಾಗಿ ಬುದ್ಧದ್ದ ಬಸವಣ್ಣ ತಿರುವಳ್ಳ ಅವರಂತೆ ಸಮಾಜದಲ್ಲಿ ಆಳವಾಗಿ ಬೇರೋರಿದ್ದ ಮೂಢನಂಬಿಕೆ ಅಸಮಾನತೆಯನ್ನು ತೊಡೆದು ಚೌಪದಿಗಳ ಮೂಲಕ ಜೀವನದ ನಿಜ ಮೌಲ್ಯಗಳನ್ನು ಸಾರಿದ ದಾರ್ಶನಿಕ ವೇಮನರು ಎಂದು ಮಕ್ಕಳ ಸಾಹಿತ್ಯ ಪ್ರೊ.ಸಂಗಮೇಶ ಗುಜಗೊಂಡ ಹೇಳಿದರು. 

   ಗುರುವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಎಸ್.ಎಸ್.ಆರ್ ಪದವಿ ಪೂರ್ವ ಮತ್ತು ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆ, ದೈಹಿಕ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ 611ನೇ ಜಯಂತಿ ಸಮಾರಂಭದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡುತ್ತಿದ್ದ ಅವರು ಮೇಮನರ ತತ್ವ ಸಿದ್ಧಾಂತಗಳು ಅವರು ಸಾರಿದ ಚೌಪದಿಗಳು ಇಂದಿನ ಜೀವನಕ್ಕೆ ದಾರಿ ದೀಪಗಳಾಗಿದ್ದು, ಅವು ನಮ್ಮ ಬದುಕಿನ ಕೈ ದೀವಿಗೆಗಳಾಗಿ ಮುನ್ನಡೆಯುತ್ತವೆ ಎಂದರು. 

    ಸಮಾರಂಭದ ಅಧ್ಯಕ್ಷತೆಯನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ ವಹಿಸಿದ್ದರು.  ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಸಂಸ್ಥೆಯ ನಿರ್ದೇಶಕ ಭೀಮಶಿ ಸೋನವಾಲ್ಕರ, ವೆಂಕಟೇಶ ಸೋನವಾಲ್ಕರ, ಅನೀಲ ಸತರಡ್ಡಿ, ಪುರಸಭೆ ಸದಸ್ಯ ಸಂತೋಷ ಸೋನವಾಲ್ಕರ, ಜಯಾನಂದ ಪಾಟೀಲ, ಈರಪ್ಪ ಮುನ್ಯಾಳ, ಹುಸೇನ ಶೇಖ, ಸಿದ್ದಪ್ಪ ಮಗದುಮ್, ಕಾಲೇಜಿ ಪ್ರಾಚಾರ್ಯ ಎ.ಪಿ.ರಡ್ಡಿ, ಶಂಕರ ಚಿಪ್ಪಲಕಟ್ಟಿ, ಅನ್ವರ ನದಾಫ್, ಬಸು ಝಂಢೇಕುರಬರ, ಪ್ರಕಾಶ ಮುಗಳಖೋಡ, ಪುಲಕೇಶ ಸೋನವಾಲ್ಕರ, ವೆಂಕಟೇಶ ಸೋನವಾಲ್ಕರ ಚೇತನ ಹೊಸಕೋಟಿ, ಭೀಮಶಿ ಹೊಸಕೋಟಿ ಮತ್ತಿತರರು ಇದ್ದರು 

ಸುದ್ದಿ ಓದಿ