ಅಧಿಕಾರ ಮೊಟಕುಗೊಳಿಸುವಂತೆ ಸುಪ್ರೀಂಗೆ ಮನವಿ ಮಾಡಲು ಮುಂದಾದ ಆಂಧ್ರ ಸಿಎಂ
ಅಮರಾವತಿ,ನ.20- ರಾಜ್ಯದಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಒಪ್ಪಿಗೆಯ ಅನುಮತಿಯನ್ನು ಹಿಂಪಡೆದು, ಈ ಮೂಲಕ ಕೇಂದ್ರ ಸಕರ್ಾರ ರಾಜ್ಯದಲ್ಲಿ ನಡೆಸುತ್ತಿದ್ದ ತನಿಖೆಗಳಿಗೆ ಬ್ರೇಕ್ ಹಾಕಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತೀಗ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿದರ್ೇಶನಾಲಯದಂತಹ ಕೇಂದ್ರೀಯ ಏಜೆನ್ಸಿಗಳ ಅಧಿಕಾರವನ್ನು ಮೊಟಕುಗೊಳಿಸುವಂತೆ ಸುಪ್ರೀಂಕೋಟರ್್ಗೆ ಮನವಿ ಮಾಡಲು ನಿರ್ಧರಿಸಿದ್ದಾರೆ.
ಬಿಜೆಪಿಯ ಎಲ್ಲಾ ವಿರೋಧಿ ಪಕ್ಷಗಳೊಂದಿಗೆ ದಿಲ್ಲಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ವನ್ನು ಸಿದ್ಧಗೊಳಿಸುತ್ತೇವೆ. ಸಿಎಂಪಿ ಸಿದ್ಧವಾದಾಗ ಎಲ್ಲ ವಿರೋಧ ಪಕ್ಷಗಳು ಸೇರಿ ಕೇಂದ್ರೀಯ ಏಜೆನ್ಸಿಗಳಿಗೆ ತಮ್ಮ ತಮ್ಮ ರಾಜ್ಯದಲ್ಲಿ ನಡೆಸುತ್ತಿರುವ ತನಿಖೆಯನ್ನು ನಿಲ್ಲಿಸುವಂತೆ ಕೇಂದ್ರೀಯ ಏಜೆನ್ಸಿಗಳಿಗೆ ಸೂಚನೆ ನೀಡಲಿವೆ. ಈ ಮೂಲಕ ಕೇಂದ್ರದ ರಾಜಕೀಯ ಅಜೆಂಡಾವನ್ನು ಹತ್ತಿಕ್ಕುವುದು ನಮ್ಮ ಉದ್ದೇಶವಾಗಿದೆ ಎಂದು ಟಿಡಿಪಿ ಸಂಸದರೊಬ್ಬರು ತಿಳಿಸಿದ್ದಾರೆ.
ಎಲ್ಲ ಪಕ್ಷಗಳು (ಬಿಜೆಪಿ ವಿರೋಧಿ) ಮತ್ತೊಂದು ಸಮಾಲೋಚನಾ ಸಭೆ ನಡೆಸಲಿವೆ. ಅಗತ್ಯವಿದ್ದರೆ ಮತ್ತು ಒಮ್ಮತವಾದರೆ, ಆದಾಯ ತೆರಿಗೆ ಮತ್ತು ಇಡಿ ಅಧಿಕಾರಿಗಳನ್ನು ಮೊಟಕುಗೊಳಿಸುವಂತೆ ಸವರ್ೋಚ್ಚ ನ್ಯಾಯಾಲಯಕ್ಕೆ ಈ ಬಗ್ಗೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಸಂಸದ ಸಿಎಂ ರಮೇಶ್, ಶಾಸಕ ಪೊಥುಲಾ ರಾಮರಾವ್ , ಮಾಜಿ ಶಾಸಕ ಬೀಡಾ ಮಸ್ತಾನ್ ರಾವ್ ಸೇರಿದಂತೆ ಟಿಡಿಪಿ ಮುಖಂಡರ ಉದ್ಯಮ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಹುಡುಕಾಟ ಪ್ರಾರಂಭಿಸಿದೆ. ಇದೆಲ್ಲ ನಡೆಯುತ್ತಿರುವುದು ನಾವು ಎನ್ಡಿಎ ಕೂಟದಿಂದ ಹೊರಬಿದ್ದ ಮೇಲೆ ಎಂದು ಟಿಡಿಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಸಿಬಿಐ, ಜಾರಿ ನಿದರ್ೇಶನಾಲಯ (ಇಡಿ), ಅದಾಯ ತೆರಿಗೆ ಇಲಾಖೆ (ಐಟಿ) ತನಿಖಾಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತಮ್ಮ ರಾಜಕೀಯ ವೈರಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ನಾಯ್ಡು ಇತ್ತೀಚೆಗೆ ಆರೋಪಿಸಿದ್ದರು.
ಇದರ ಬೆನ್ನಲ್ಲೇ, ರಾಜ್ಯದಲ್ಲಿ ಸಿಬಿಐ ಅಧೀನದಲ್ಲಿರುವ ಎಲ್ಲಾ ಪ್ರಕರಣಗಳ ತನಿಖೆಯನ್ನು ನಡೆಸಲು ಸಿಬಿಐ ಬದಲಾಗಿ ಎಸಿಬಿ (ಭ್ರಷ್ಟಚಾರ ನಿಗ್ರಹ ದಳ)ಗೆ ಜವಾಬ್ದಾರಿಯನ್ನ ವಗರ್ಾವಣೆ ಮಾಡಲಾಗಿದೆ ಎಂದು ಆಂಧ್ರಪ್ರದೇಶ ಸಕರ್ಾರ ಅಧಿಸೂಚನೆ ಹೊರಡಿಸಿತು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 