ಯೋಗ ಶಿಕ್ಷಣದಿಂದ ಆತ್ಮ ಬಲ ವೃದ್ಧಿಸುತ್ತದೆ. : ಸುರೇಶ ಮುದ್ದಾರ
Yoga education increases self-strength: Suresh Muddara
ಲೋಕದರ್ಶನ ವರದಿ
ಗೋಕಾಕ 20 : ಸಮಾಜಮುಖಿಯಾಗಿ ವ್ಯಕ್ತಿತ್ವ ರೂಪುಗೊಳ್ಳಲು ಯೋಗ ಸಹಕಾರಿಯಾಗಿದ್ದು ಆ ಕಲಿಕೆಯಿಂದ ಆತ್ಮಬಲ ವೃದ್ಧಿಸುತ್ತದೆ ಎಂದು ಸುರೇಶ ಮುದ್ದಾರ ಹೇಳಿದರು ಅವರು ವಿವೇಕಾನಂದ ನಗರದ ಜೆ.ಸಿ.ಐ ಸಭಾಂಗಣದಲ್ಲಿ ಶ್ರೀ ವಿವೇಕಾನಂದ ಯೋಗ ಮತ್ತು ಸಂಸ್ಕೃತಿ ವಿಕಾಸ ಸಂಘದ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ ಉದ್ದೇಶಿಸಿ ಮಾತನಾಡುತ್ತ ದೈಹಿಕ ಹಾಗೂ ಮಾನಸಿಕ ಸಧೃಡತೆಗೆ ಯೋಗ ಶಿಕ್ಷಣ ಉಪಕಾರಿಯಾಗಿದ್ದು ನೈತಿಕತೆಯೂ ಹೆಚ್ಚಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಜೆ.ಸಿ.ಐ ರಾಷ್ಟ್ರೀಯ ವಿಭಾಗೀಯ ಸಂಚಾಲಕ ಹಾಗೂ ವಕೀಲ ವಿಷ್ಣು ಲಾತೂರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಿರಿಯ ಬಯಲಾಟ ಕಲಾವಿದ ಈಶ್ವರಚಂದ್ರ ಬೆಟಗೇರಿ, ಸಾಹಿತಿ ಜಯಾನಂದ ಮಾದರ, ವೈದ್ಯ ಪ್ರಮೋದ ಎತ್ತಿನಮನಿ, ಮುಖ್ಯೋಪಾಧ್ಯಾಯ ಈರಣ್ಣ ಕಡಕೋಳ, ಕಿರಣ ಗಂಗರಡ್ಡಿ ವೇದಿಕೆ ಮೇಲೆ ಉಪಸ್ಥತರಿದ್ದರು. ಮೂಡಬಿದರೆ ಆಳ್ವಾಸ ಶಿಕ್ಷಣ ಸಂಸ್ಥೆಗೆ ಆಯ್ಕೆಯಾದ ಕು.ಶ್ರದ್ಧಾ ಕಾಳಪ್ಪಾ ಕಮ್ಮಾರ ಮತ್ತು ಸಾನ್ವಿ ಗುರು ಬಬಲಿ ಪಾಲಕರ ಸಮೇತ ಗೌರವ ಸನ್ಮಾನ ನೀಡಲಾಯಿತು. ಯೋಗ ಶಿಕ್ಷಕ ಆನಂದ ಸೋರಗಾವಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸ್ವಾತಿ ಮಗದುಮ್ಮ ಸ್ವಾಗತಿಸಿ. ಚೈತ್ರಾ ಕಮ್ಮಾರ ನಿರೂಪಿಸಿ. ಅಂಜನಾ ಸೋರಗಾವಿ ವಂದಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 