ಹುಕ್ಕೇರಿ

ನಿನ್ನೆ ಸರ್ವರ್ ಹ್ಯಾಕ್ ಇಂದು ಅನುಮಾನ: ಸತೀಶ್ ಜಾರಕಿಹೊಳಿ ಯುಟರ್ನ

ನಿನ್ನೆ ಸರ್ವರ್ ಹ್ಯಾಕ್ ಇಂದು ಅನುಮಾನ: ಸತೀಶ್ ಜಾರಕಿಹೊಳಿ ಯುಟರ್ನ

ಹುಕ್ಕೇರಿ 22: ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವ ಸತಿಶ ಜಾರಕಿಹೋಳಿ ಮಂಗಳವಾರ ಸರ್ವರ್ ಹ್ಯಾಕ ಮಾಡಿದ್ದರಿಂದ ಸರ್ಕಾರದ ಯೋಜನೆ ಅನುಷ್ಟಾನಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿಕೆ ನೀಡಿದ ಹಿನ್ನಲೆಯಲ್ಲಿ ವಿರೋಧ ಪಕ್ಷದವರಿಂದ ವಿರೋಧ ವ್ಯಕ್ತ ವಾಗುತ್ತಿರುವದನ್ನು ಮನಗಂಡು ಇಂದು ಸರ್ವರ್ ಹ್ಯಾಕ್  ಹೇಳಿಕೆಗೆ ಯುಟರ್ನ ಹೊಡೆದಿದ್ದಾರೆ. 

 ಸಚಿವ ಸತೀಶ ಜಾರಕಿಹೊಳಿ. ಹುಕ್ಕೇರಿ ಪಟ್ಟಣದಲ್ಲಿ ಮಾದ್ಯಮದವರು ಕೇಳಿದ ಪ್ರಶ್ನೆಗೆ ಚರ್ಚೆಯನ್ನ ಇಲ್ಲಿಯೇ ಕ್ಲೋಸ್ ಮಾಡುವಂತೆ ಸಚಿವ ಸತೀಶ ಮನವಿಮಾಡಿ,ಪರೋಕ್ಷವಾಗಿ ತಮ್ಮ ಹೇಳಿಕೆಯನ್ನ ವಾಪಸ್ಸು ಪಡೆದರು.  ಮಾತು ಮುಂದೆವರೆಸಿ  ಅದೊಂದು ರಾಜಕೀಯ ಸ್ಟೇಟಮೆಂಟ್, ಬಿಜೆಪಿ ಯವರ ಇಂಥ ನೂರಾರು ಹೇಳಿಕೆ ನೀಡಿದ್ದಾರೆ ಎಲ್ಲದಕ್ಕೂ ಪುರಾವೆ ಇರುವದಿಲ್ಲಾ, ನನಗೆ ಅನುಮಾನ ಬಂದಿದ್ದನ್ನ ನಾನು ಹೇಳಿದ್ದೇನೆಸರ್ವರ್ ಹ್ಯಾಕ್ ಆಗಿಲ್ಲ ಎಂದರೆ ಮುಗಿದು ಹೋಯಿತು ಅಷ್ಟೆ ಹಿಂದೆ ಕೇಂದ್ರ ಸರಕಾರದ ಮೇಲೆ ಫೋನ್ ಟ್ಯಾಪಿಂಗ್ ಇವಿಎಮ್ ಹ್ಯಾಕ್ ದಂಥ ಆಪಾದನಿಗಳಿವೆಹೀಗಾಗಿ ಅದೇ ರೀತಿ ಆಗಿರಬಹದು ಎನ್ನುವದು ನನ್ನ ಸಂಶಯ.ಪ್ರಧಾನಿ ಹಿಡಿದು ಬಿಜೆಪಿ ಅವರು ಇಂಥ ಅನೇಕ ಹೇಳಿಕೆ ಕೊಟ್ಟಿದ್ದಾರೆ.ಸರ್ವರ್ ಹ್ಯಾಕ್ ಹೇಳಿಕೆಗೆ ಕಾಂಗ್ರೆಸ್ ನಾಯಕರ ಸಮರ್ಥನೆಗೆ ಬಾರದ ವಿಚಾರಅದು ನನ್ನ ಹೇಳಿಕೆ ಅವರ್ಯಾಕೆ ಸಮರ್ಥನಗೆ ಬರಬೇಕು ಎಂದು ಸತೀಶ್ ಮಾದ್ಯಮದವರಿಗೆ ಪ್ರಶ್ನೆ ಹಾಕಿದರು.ನನಗೆ ಅನ್ನಿಸಿದ್ದನ್ನ ಹೇಳಿದ್ದೇನೆ ಕೆಸರನಲ್ಲಿ ಕಲ್ಲು ಹುಡುಕುವದು ಬೇಡ ದಿನಾಲೂ ಸಾಕಷ್ಟು ಆರೋಪ ಪ್ರತ್ಯಾರೋಪಗಳು ಬರುತ್ತವೆ ಎಲ್ಲದಕ್ಕೂ ಕಾಗದ ತೋರಿಸಲು ಆಗುವದಿಲ್ಲನನ್ನ ಹೇಳಿಕೆಯನ್ನ ಕ್ಲೋಸ್ ಮಾಡುವಂತೆ ಮನವಿ ಮಾಡಿದರು.  

ನಂತರ  ಹುಕ್ಕೇರಿ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆ ಜರುಗಿಸಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಕುಡಿಯುವ ನೀರಿನ ಅಭಾವವಾಗದಂತೆ ಕ್ರಮ ಜರುಗಿಸಬೇಕು ಮತ್ತು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದಿಂದ ಗ್ರಾಹಕರಿಗೆ ಸರ್ಕಾರದ ಗೃಹಜ್ಯೋತಿ ಯೋಜನೆ ಲಭಿಸುವಂತೆ ಕ್ರಮ ಜರುಗಿಸಬೇಕು, ಸಾಕು ಪ್ರಾಣಿಗಳ ಆರೋಗ್ಯ ಕುರಿತು ಮುಂಜಾಗ್ರತಾ ಕ್ರಮ ಜರುಗಿಸಬೇಕು, ರಸ್ತೆ, ನೀರಾವರಿ, ತೋಟಗಾರಿಕೆ, ಸಾರಿಗೆ ಸಂಸ್ಥೆಯ ಕಾರ್ಯವೈಖರಿ ಕುರಿತು ಮಾಹಿತಿ ಪಡೆದು ಸಲಹೆ ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ತಹಸಿಲ್ದಾರ ಸಂಜಯ ಇಂಗಳೆ, ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್ ಸಿದ್ನಾಳ, ಹಾಗೂ ವಿವಿಧ ತಾಲೂಕು ಮಟ್ಟದ ಅನುಷ್ಟಾನ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ