ಹೊಸ ಗಂಭೀರ ಸಾಂಕ್ರಾಮಿಕ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
ನ್ಯೂಯಾರ್ಕ್
,ಡಿಸೆಂಬರ್ 28: ಕೊರೋನಾವೈರಸ್ ಭೀಕರವಲ್ಲವಾದರೂ ಮತ್ತೊಂದು ಗಂಭೀರ ಸಾಂಕ್ರಾಮಿಕವು ವಿಶ್ವಾದ್ಯಂತ
ವ್ಯಾಪಿಸುವ ಬಲವಾದ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈ
ಕುರಿತಂತೆ ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್ ಗೆಬ್ರಿಯೆಸುಸ್
, ಸಂಸ್ಥೆಯು ಹೊಸ ರೂಪಾಂತರಗಳ ಹರಡುವಿಕೆ, ಜನರು ಅನಾರೋಗ್ಯಕ್ಕೆ ತುತ್ತಾಗುವುದು, ಚಿಕಿತ್ಸೆ, ಲಸಿಕೆ
ಸೇರಿದಂತೆ ವೈರಸ್ ಬಗ್ಗೆ ಪ್ರತಿದಿನ ಪರಿಶೀಲಿಸಿ ಮಾಹಿತಿ ಪಡೆಯುತ್ತಿದೆ. ಕೋವಿಡ್ ನ ಹೊಸ ರೂಪಾಂತರ
ಕಂಡು ಬಂದಿರುವ ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಸಂಸ್ಥೆಯ ವಿಜ್ಞಾನಿಗಳು ಸಾಂಕ್ರಾಮಿಕ ಕುರಿತ
ಅಧ್ಯಯನ ನಡೆಸುತ್ತಿದ್ದಾರೆ. ಈ ಅಧ್ಯಯನಗಳಿಂದ ಸಂಸ್ಥೆ
ಮುಂದಿನ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ಮುಂದಿನ
ಸಾಂಕ್ರಾಮಿಕ ಮತ್ತಷ್ಟು ತೀವ್ರವಾಗಲಿರುವ ಹಿನ್ನೆಲೆಯಲ್ಲಿ ಎಲ್ಲ ದೇಶಗಳು ಒಟ್ಟಾಗಿ ಇದನ್ನು ಎದುರಿಸಬೇಕಾಗಿದೆ
ಎಂದು ಅವರು ಹೇಳಿದ್ದಾರೆ.