ಸೃಜನಾತ್ಮಕ ಬೋಧನೆ- ಕಲಿಕಾ ಕಾರ್ಯತಂತ್ರಗಳು ಕುರಿತು ಕಾರ್ಯಾಗಾರ
ವಿಜಯಪುರ 27: ಸೃಜನಾತ್ಮಕ ಬೋಧನೆ ಮತ್ತು ಕಲಿಕಾ ಕಾರ್ಯತಂತ್ರಗಳು ಕುರಿತು ಒಂದು ದಿನದ ಕಾರ್ಯಾಗಾರ ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ನಡೆಯಿತು.
.ಬಿ.ಎಲ್.ಡಿ.ಇ ಸಂಸ್ಥೆಯ ಬಿ. ಎಂ. ಪಾಟೀಲ ಪಬ್ಲಿಕ್(ಸಿಬಿಎಸ್‌ಇ) ಶಾಲೆ ಮತ್ತು ಬಿ. ಎಂ ಪಾಟೀಲ್ ಪಬ್ಲಿಕ್(ಐಸಿಎಸ್‌ಇ) ಶಾಲೆಯ ಶಿಕ್ಷಕರಿಗಾಗಿ ಆಯೋಜಿಸಲಾದ ಈ ಕಾರ್ಯಾಗಾರವನ್ನು ಶೈಕ್ಷಣಿಕ ಸಂಯೋಜಕಿ ದೀಪಾ ಜಂಬೂರೆ ಉದ್ಘಾಟಿಸಿದರು.
ಜಾಗೃತ ಮನಸ್ಥಿತಿ ಮತ್ತು ಭೋದನೆ ತಂತ್ರಗಳು ವಿಷಯ ಕುರಿತು ಬಿ. ಎಂ. ಪಾಟೀಲ ಪಬ್ಲಿಕ್ (ಸಿಬಿಎಸ್) ಶಾಲೆಯ ಉಪಪ್ರಾಚಾರ್ಯೆ ವಸುಧಾ ನಾರ್ವೇಕರ ಉಪನ್ಯಾಸ ನೀಡಿದರು. ಬಿ. ಎಂ. ಪಾಟೀಲ ಪಬ್ಲಿಕ್ (ಐಸಿಎಸ್‌ಇ) ಶಾಲೆಯ ಪ್ರಾಚಾರ್ಯ ವಿಕ್ರಮ ನಾರ್ವೇಕರ ಅವರು ಸೃಜನಾತ್ಮಕ ಬೋಧನೆ ಮತ್ತು ಕಲಿಕೆಯ ಕಾರ್ಯತಂತ್ರಗಳು ವಿಷಯದ ಕುರಿತು ಮಾತನಾಡಿ ಮನಸ್ಸಿನ ಏಕಾಗ್ರತೆ, ಶಾಂತ ಮನೋಭಾವ ಹಾಗೂ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂವಹನ ನಡೆಸುವ ವಿಧಾನಗಳ ಕುರಿತು ಶಿಕ್ಷಕರಿಗೆ ತರಬೇತಿ ನೀಡಿದರು.
ಈ ತರಬೇತಿಯಲ್ಲಿ ನಾನಾ ಚಟುವಟಿಕೆಗಳು, ಗುಂಪು ಚರ್ಚೆಗಳು ಹಾಗೂ ಪ್ರಾಯೋಗಿಕ ಅಭ್ಯಾಸಗಳನ್ನು ಆಯೋಜಿಸಲಾಗಿತ್ತು. ನಾನಾ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಯಾವ ರೀತಿ ಕಲಿಕಾ ಆಸಕ್ತಿಯನ್ನು ಉಂಟು ಮಾಡಬಹುದು ಎಂಬುದನ್ನು ಅವರು ವಿವರಿಸಿದರು.ಆಂಗ್ಲ ಭಾಷಾ ಶಿಕ್ಷಕ ಯೋಗಿರಾಜ ಹಳಕಟ್ಟಿ ಸ್ವಾಗತಿಸಿದರು. ಮೀರಾ ಮೋಕಾಶಿ ವಂದಿಸಿದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 