ಮುಂಗಾರು ಹಂಗಾಮು ಸಿದ್ಧತೆ: ಬಳ್ಳಾರಿ ಜಿಲ್ಲೆಯಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆಗಳು

ಮುಂಗಾರು ಹಂಗಾಮು ಸಿದ್ಧತೆ: ಬಳ್ಳಾರಿ ಜಿಲ್ಲೆಯಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆಗಳು Monsoon season preparations: Agricultural activities have intensified in Bellary district

ಲೋಕದರ್ಶನ ವರದಿ

ಬಳ್ಳಾರಿ 02:  ಜಿಲ್ಲೆಯಲ್ಲಿ ಮುಂಗಾರು ಪೂರ್ವದಲ್ಲಿ ಹಲವೆಡೆ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಸಾಗರೋತ್ತರ ವೇಗವನ್ನು ಪಡೆದುಕೊಂಡಿದ್ದು, ರೈತ ಸಮುದಾಯದಲ್ಲಿ ಮಂದಹಾಸ ಮೂಡಿಸಿದೆ. ಪ್ರಸ್ತುತ ಲಭ್ಯವಿರುವ ಉತ್ತಮ ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ತಮ್ಮ ಕೃಷಿ ಭೂಮಿಯನ್ನು ಹದಗೊಳಿಸುವ ಕಾರ್ಯಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ. ರಂಟೆ-ಕುಂಟೆ ಹೊಡೆಯುವುದು, ರೋಟವೇಟರ್ ಹಾಗೂ ಎತ್ತುಗಳ ನೇಗಿಲು ಬಳಸಿ ಭೂಮಿಯನ್ನು ಹದಗೊಳಿಸುವ ದೃಶ್ಯಗಳು ಜಿಲ್ಲೆಯಾದ್ಯಂತ ಸಾಮಾನ್ಯವಾಗುತ್ತಿವೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆಯು 599.0 ಮಿ.ಮೀ ಆಗಿರುತ್ತದೆ. ಮೇ 31ರ ಅಂತ್ಯಕ್ಕೆ ಸರಾಸರಿ ವಾಡಿಕೆ ಮಳೆಯು 74.4 ಮಿ.ಮೀ ಇರಬೇಕಾಗಿದ್ದು, ಪ್ರಸ್ತುತ 72.4 ಮಿ.ಮೀ ನಷ್ಟು ಉತ್ತಮ ಮಳೆಯಾಗಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಟಿ. ಸೋಮಸುಂದರ್ ಅವರು ತಿಳಿಸಿದ್ದಾರೆ.