ಮೂಡಲಗಿ

ಗ್ರಾಮಗಳ ಅಭಿವೃದ್ಧಿಗೆ ನಿಸ್ವಾರ್ಥದಿಂದ ಕೆಲಸ ಮಾಡಿ: ಗಿರಡ್ಡಿ

ಗ್ರಾಮಗಳ ಅಭಿವೃದ್ಧಿಗೆ ನಿಸ್ವಾರ್ಥದಿಂದ ಕೆಲಸ ಮಾಡಿ: ಗಿರಡ್ಡಿ

ಮೂಡಲಗಿ 12: ಗ್ರಾಪಂ ಚುನಾಯಿತ ಪ್ರತಿನಿಧಿಗಳು ಹುಣಶ್ಯಾಳ ಗ್ರಾಪಂ ವ್ಯಾಪ್ತಿಯ ಬೈರನಟ್ಟಿ, ಹೊಸಟ್ಟಿ ಮತ್ತು ಬೀಸನಕೋಪ್ಪ ಗ್ರಾಮಗಳ ಅಭಿವೃದ್ಧಿಗೆ ನಿಸ್ವಾರ್ಥದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿ ಮತದಾರರ ತಮ್ಮ ಮೇಲೆ ಇಟ್ಟ ಪ್ರೀತಿ ವಿಶ್ವಾಸಕ್ಕೆ ಪ್ರಾತವಾಗಬೇಕೆಂದು ಹುಣಶ್ಯಾಳ ಪಿವೈ ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ ಹೇಳಿದರು.

ಅವರು ಮೂಡಲಗಿ ತಾಲೂಕಿನ ಹುಣಶ್ಯಾಳ ಪಿವೈ ಗ್ರಾಮ ಪಂಚಾಯತ ಆವರಣದಲ್ಲಿ ನಡೆದ ಗ್ರಾಪಂ ನೂತನ ಸದಸ್ಯರಿಗೆ  ನಾಗರೀಕ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು

ಸದಸ್ಯ ಪ್ರಕಾಶ ಪಾಟೀಲ ಮಾತನಾಡಿ, ಗ್ರಾಮದಲ್ಲಿ ನೀರು ಸರಬರಾಜು, ರಸ್ತೆಗಳ ಅಭಿವೃದ್ಧಿ ಹಾಗೂ ಅನೇಕ ಅಭಿವೃದ್ದಿ ಕೆಲಸಗಳನ್ನು ಕೈಗೊಂಡು ಮತದಾರರ ವಿಶ್ವಾಸಕ್ಕೆ ಚ್ಯತಿ ಬರದಂತೆ ಕೆಲಸ ಮಾಡುವುದಾಗಿ ಭರವಸೆ ನೀಡಿದರು. 

ನೂತನ ಗ್ರಾಪಂ ಸದಸ್ಯರನ್ನು ಸತ್ಕರಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಗೋಪಾಲ ಬೀಳ್ಳೂರ, ಹಣಮಂತ ಗುಡ್ಲಿ, ಹಣಮಂತ ಕಟ್ಟಿಮನಿ, ಶಿವಲಿಂಗ ಜೋಗನ್ನವರ, ರವಿ ದೇಶಪಾಂಡೆ, ಬಸಪ್ಪ ಗಿರಡ್ಡಿ, ಪಾಯಪ್ಪ ಉಪ್ಪಿನ್, ಅಶೋಕ ಬಟಕುರ್ಕಿ, ಗುರುನಾಥ ಬೀಳ್ಳೂರ, ಮಲ್ಲಪ್ಪ ಗೌಡನ್ನವರ, ಬಸಪ್ಪ ಶಿರೋಳ, ವೆಂಕಪ್ಪ ಕುರುಬರ, ವೆಂಕಪ್ಪ ಮೂಡಲಗಿ, ಅರ್ಜುನ ದೇಶಾಯಿ, ಭೀಮಪ್ಪ ಬೀಳ್ಳೂರ ಮತ್ತಿತರು ಇದ್ದರು. 

ಗ್ರಾಪಂ ಪಿಡಿಓ ಸದಾಶಿವ ದೇವರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕ ಬಿ.ಪಿ.ಕೋಟಿ ನಿರೂಪಿಸಿ ವಂದಿಸಿದ್ದರು.

ಸುದ್ದಿ ಓದಿ