ಐರ್ಲೆಂಡ್ ವಿರುದ್ಧ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ವಿಂಡೀಸ್
ಸೇಂಟ್ ಜಾರ್ಜ್, ಜ 13, ಐರ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲೂ ಡೆಕ್ವರ್ತ್ ಲೂವಿಸ್ ನಿಯಮದಡಿಯಲ್ಲಿ ಐದು ವಿಕೆಟ್‌ಗಳ ಅಂತರದ ಗೆಲುವು ಬಾರಿಸಿರುವ ವೆಸ್ಟ್‌ಇಂಡೀಸ್, ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಇದರ ನಡುವೆ ಐರ್ಲೆಂಡ್ ವಿರುದ್ಧದ ಟ್ವೆಂಟಿ-20 ಸರಣಿಗೆ ವಿಂಡೀಸ್ ತಂಡವನ್ನು ಪ್ರಕಟಿಸಲಾಗಿದ್ದು, ಹಿರಿಯ ಅನುಭವಿ ಆಲ್‌ರೌಂಡರ್ ಡ್ವೇನ್ ಬ್ರಾವೋ ಮೂರು ವರ್ಷಗಳ ಬಳಿಕ ತಂಡಕ್ಕೆ ಮರಳಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್, ನಾಯಕ ಆಂಡ್ರೊ ಬಾಲ್ಬಿರ್ನಿ ಅರ್ಧಶತಕದ (71) ಹೊರತಾಗಿಯೂ 49.1 ಓವರ್‌ಗಳಲ್ಲಿ 203 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ವಿಂಡೀಸ್ ಪರ ಹೇಡನ್ ವಾಲ್ಷ್ ನಾಲ್ಕು, ಒಶಾನೆ ಥಾಮಸ್ ಮೂರು ಮತ್ತು ರೋಸ್ಟನ್ ಚೇಸ್ ಎರಡು ವಿಕೆಟ್ ಪಡೆದುಕೊಂಡಿದ್ದರು.
ಬಳಿಕ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡಕ್ಕೆ ಮಳೆ ಅಡ್ಡಿಪಡಿಸಿತ್ತು. ಇದರಿಂದಾಗಿ 197 ರನ್‌ಗಳಿಗೆ ಗುರಿ ಮರು ನಿಗದಿಪಡಿಸಲಾಗಿತ್ತು. ಈ ಮಧ್ಯೆ ಅಮೋಘ ಶತಕ ಸಿಡಿಸಿದ ಎವಿನ್ ಲೆವಿಸ್ ಇನ್ನು 64 ಎಸೆತಗಳು ಬಾಕಿ ಉಳಿದಿರುವಂತೆಯೇ ತಂಡವನ್ನು ಗೆಲುವಿನ ಗುರಿ ದಾಟಿಸಿದರು. 97 ಎಸೆತಗಳನ್ನು ಎದುರಿಸಿದ ಲೆವಿಸ್ ಆರು ಬೌಂಡರಿ ಹಾಗೂ ಐದು ಸಿಕ್ಸರ್‌ಗಳಿಂದ 102 ರನ್ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಿಕೋಲಸ್ ಪೂರನ್ ಅಜೇಯ 43 ಹಾಗೂ ಬ್ರಂಡನ್ ಕಿಂಗ್ 38 ರನ್ ಗಳಿಸಿ ಮಿಂಚಿದರು.ಈ ಮಧ್ಯೆ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳಿಗಾಗಿನ ವೆಸ್ಟ್‌ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ಇದರಂತೆ 36ರ ಹರೆಯದ ಹಿರಿಯ ಆಲ್‌ರೌಂಡರ್ ಡ್ವೇನ್ ಬ್ರಾವೋ ಮೂರು ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡಿದ್ದಾರೆ.
ಮುಂಬರುವ ಟ್ವೆಂಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ಬ್ರಾವೋ ನಿರ್ವಹಣೆ ನಿರ್ಣಾಯಕವೆನಿಸಲಿದೆ. ಬ್ರಾವೋ ಕೊನೆಯದಾಗಿ 2016ರಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದರು. ಅಲ್ಲಿಂದ ಬಳಿಕ ಫ್ರಾಂಚೈಸಿ ಕ್ರಿಕೆಟ್‌ನತ್ತ ಮುಖ ಮಾಡಿದ್ದರು ಬ್ರಾವೋ ವೃತ್ತಿ ಜೀವನ ವಿವಾದದಿಂದ ಹೊರತಾಗಿರಲಿಲ್ಲ. 2014ರಲ್ಲಿ ವೇತನಾ ಹೆಚ್ಚಳಕ್ಕೆ ಸಂಬಂಧಿಸಿದಂತೆ ಭಾರತ ಸರಣಿಯಿಂದ ಹೊರಗುಳಿದಿದ್ದರು. 66 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಬ್ರಾವೋ 52 ವಿಕೆಟ್‌ಗಳನ್ನು ಕಬಳಿಸಿದ್ದು, ಒಟ್ಟು 1142 ರನ್ ಪೇರಿಸಿದ್ದಾರೆ.ಈ ನಡುವೆ ಟೆಸ್ಟ್ ತಂಡದ ನಾಯಕ ಜೇಸನ್ ಹೋಲ್ಡರ್‌ಗೆ ವಿಶ್ರಾಂತಿ ಸೂಚಿಸಲಾಗಿದೆ. ಇನ್ನೊಂದೆಡೆ 23 ಟಿ20 ಪಂದ್ಯಗಳ ಅನುಭವವುಳ್ಳ ರೋವ್‌ಮ್ಯಾನ್ ಪೊವೆಲ್ ಕಮ್‌ಬ್ಯಾಕ್ ಮಾಡಿದ್ದಾರೆ.ವೆಸ್ಟ್‌ಇಂಡೀಸ್ ಟಿ20 ತಂಡ ಇಂತಿದೆ:ಕೀರಾನ್ ಪೊಲಾರ್ಡ್ (ನಾಯಕ), ಡ್ವೇನ್ ಬ್ರಾವೋ, ಶೆಲ್ಡನ್ ಕಾಟ್ರೆಲ್, ಶಿಮ್ರಾನ್ ಹೆಟ್ಮಾಯರ್, ಬ್ರಂಡನ್ ಕಿಂಗ್, ಎವಿನ್ ಲೆವಿಸ್, ಖಾರಿ ಪಿಯರ್, ನಿಕೋಲಸ್ ಪೂರನ್, ರೋವ್‌ಮ್ಯಾನ್ ಪೊವೆಲ್, ಶೆರ್ಫಾನ್ ರುಥರ್‌ಫೋರ್ಡ್, ಲಿಂಡನ್ ಸಿಮನ್ಸ್, ಹೇಡನ್ ವಾಲ್ಶ್, ಕೆಸ್ರಿಕ್ ವಿಲಿಯಮ್ಸ್.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 