ಶಿರಹಟ್ಟಿ

ಹೆಚ್ಚಿದ ಶಿರಹಟ್ಟಿ ಪಪಂ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರ ಪೈಪೋಟಿ: ಯಾರಿಗೊಲಿಯಲಿದೆ ಅಧ್ಯಕ್ಷರ ಖುರ್ಚಿ

ಹೆಚ್ಚಿದ ಶಿರಹಟ್ಟಿ ಪಪಂ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯರ ಪೈಪೋಟಿ: ಯಾರಿಗೊಲಿಯಲಿದೆ ಅಧ್ಯಕ್ಷರ ಖುರ್ಚಿ

ಶಿರಹಟ್ಟಿ,16 : ಇದೇ ಅಗಷ್ಟ್‌ 20ರಂದು ಸ್ಥಳೀಯ ಪಟ್ಟಣ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಧೀಕೃತವಾಗಿ ಚುನಾವಣೆ ನಡೆಸುತ್ತೇವೆ ಎಂದು ಚುನಾವಣಾಧಿಕಾರಿಗಳಾದ  ಶಿರಹಟ್ಟಿ ತಹಶೀಲ್ದಾರ ಅನೀಲ ಬಡಿಗೇರ ಘೋಷಣೆ ಮಾಡಿದ್ದು, ಮಹಿಳಾ ಆಕಾಂಕ್ಷಿಗಳ ಪೈಪೋಟಿ ದಿನದಿಂದ ದಿನಕ್ಕೆ ಕಾವೇರುತ್ತಿದೆ. 

ಈ ಅಧ್ಯಕ್ಷ ಸ್ಥಾನಕ್ಕೆ ಅಗತ್ಯ ಸಂಖ್ಯಾ ಬಲ ಹೊಂದಿರುವ ಕಾಂಗ್ರೆಸ್ ಪಕ್ಷದಲ್ಲಿ ಮೂವರು ಮಹಿಳಾ ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದು, ಹೇಗಾದ್ರೂ ಮಾಡಿ ಅಧ್ಯಕ್ಷ ಸ್ಥಾನವನ್ನು ಏರಲೇಬೇಕೆಂದು ಕಸರತ್ತು ನಡೆಸಿರುವುದು ಸಧ್ಯ ಶಿರಹಟ್ಟಿ ಪಟ್ಟಣದ ವ್ಯಾಪ್ತಿಯಲ್ಲಿ ಬಿರುಗಾಳಿ ಎದ್ದಂತಾಗಿದೆ. ಸದಸ್ಯರಿಗೆಲ್ಲ ಎಲ್ಲಿಲ್ಲದ ಪೈಪೋಟಿ ಕಾಂಗ್ರೆಸ್ ಪಕ್ಷದ ವರಿಷ್ಠರ ನಿದ್ದೆಗೆಡೆಸಿದೆ.  

ಬಿಜೆಪಿಗೆ ಶಾಸಕರ, ಸಂಸದರ ಬಲಒಟ್ಟು 18 ಸದಸ್ಯರ ಪೈಕಿ 11 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಮೊದಲ ಅವಧಿಯಂತೆ ಎರಡನೆ ಅವಧಿಯಲ್ಲಿಯೂ ಕೂಡಾ ಉಳಿದಿರುವ 14 ತಿಂಗಳು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದರೆ, ಏಳೇ ಸದಸ್ಯರನ್ನು ಹೊಂದಿದ್ದರು, ಮತದಾನದ ಹಕ್ಕು ಹೊಂದಿರುವ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಅವರು ನಮ್ಮ ಪಕ್ಷದವರೆಂದು ಬಿಜೆಪಿ ಬೀಗುತ್ತಿದೆ. 07 ಪಪಂ ಸದಸ್ಯರು, ಒರ್ವ ಶಾಸಕರು ಹಾಗೂ ಒರ್ವ ಸಂಸದರ ಬಲವನ್ನು ಹೊಂದಿರುವ ಬಿಜೆಪಿ ಪಕ್ಷವು, ಕಾಂಗ್ರೆಸ್‌ನಿಂದ ಇಬ್ಬರು ಸದಸ್ಯರು ಬಂದರೆ ಸಾಕು ಶಿರಹಟ್ಟಿ ಪಟ್ಟಣ ಪಂಚಾಯತಿ ಮೇಲೆ ಬಿಜೆಪಿ ಧ್ವಜವನ್ನು ಹಾರಿಸಿಯೇ ಬೀಡುತ್ತೆವೆ ಎಂಬುವ ಲೆಕ್ಕಾಚಾರದಲ್ಲಿ ತೋಡಿಗಿದ್ದಾರೆ.  

ಆಕಾಂಕ್ಷಿಗಳಿಂದ ಸದಸ್ಯರ ಮನೆಗೆ ಪರೇಡ್‌ದೇವಕ್ಕ ಗುಡಿಮನಿ, ವಾರ್ಡ ನಂ.15, ನೀಲಮ್ಮ ಹುಬ್ಬಳ್ಳಿ, ವಾರ್ಡ್‌ ನಂ.04 ಹಾಗೂ ದಾವಲಬಿ ಮಾಚೇನಹಳ್ಳಿ,ವಾರ್ಡ್‌ ನಂ.11, ಕಾಂಗ್ರೆಸ್ ಪಕ್ಷದ ಮೂವರು ಸದಸ್ಯರು ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನದ ಪ್ರಭಲ ಆಕಾಂಕ್ಷಿಗಳಾಗಿದ್ದಾರೆ. ಮೂವರು ಆಕಾಂಕ್ಷಿಗಳು ಉಳಿದ ಸದಸ್ಯರ ಮನೆಗಳಿಗೆ ಭೇಟಿ ನೀಡಿ ಅಧ್ಯಕ್ಷ ಸ್ಥಾನ ಅಲಂಕರಿಸಲು ತಮಗೆ ಬೆಂಬಲ ಸೂಚಿಸುವಂತೆ ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.  

ಹೇಳಿ ಕೇಳಿ ಇದು ಭಾವೈಕ್ಯತಾ ನಾಡು, ಕತೃ ಫಕ್ಕೀರೇಶ್ವರ ಬೀಡು. ದ್ವೇಷ ಬಿಡು ಪ್ರೀತಿ ಮಾಡು" ಎಂಬ ಕತೃಗಳ ಘೋಷವಾಕ್ಯದಂತೆ ಇಲ್ಲಿರುವವರೆಲ್ಲ ಭ್ರಾತೃತ್ವ ಪ್ರೀತಿಯಿಂದ ನಡೆದುಕೊಳ್ಳುತ್ತಿರುವುದೇ ಹೆಚ್ಚು. ಆದರೆ ಚುನಾವಣೆಯ ಈ ಸಂದರ್ಭದಲ್ಲಿ ಹಲವು ಸದಸ್ಯರು ಅನ್ಯ ಪಕ್ಷದವರೊಂದಿಗೆ ಕೂಡಿಕೊಳ್ಳುತ್ತಿರುವುದು ಮುಖಂಡರ ನೆಮ್ಮದಿ ಹಾಳು ಮಾಡುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. 


ಸುದ್ದಿ ಓದಿ