ಜಾತ್ಯತೀತ ಭಾರತದ ಪರಿಕಲ್ಪನೆ ಮೂಡಿಸಿದ್ದೇ ಕಲ್ಯಾಣ: ವಿ.ಎಸ್ ಮಾಳಿ
Welfare created the concept of secular India: VS Mali
ಲೋಕದರ್ಶನ ವರದಿ
ಕೊಪ್ಪಳ 21: ಜಾತ್ಯತೀತ ಭಾರತದ ಪರಿಕಲ್ಪನೆ ಮೂಡಿಸಿದ್ದೇ ಕಲ್ಯಾಣ ಎಂದು ವಿದ್ವಾಂಸ ವಿ ಎಸ್ ಮಾಳಿ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನ ಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ನಗರಸಭೆ, ಬಸವ ಜಯಂತ್ಯುತ್ಸವ ಸಮಿತಿ ಕೊಪ್ಪಳ ಮತ್ತು ಬಸವಾನುಯಾಯಿ ಸಂಘ ಸಂಸ್ಥೆಗಳ ಸಹಯೋಗದಲ್ಲಿ
ಏಪ್ರೀಲ್ 20ರಂದು ಶ್ರೀ ಗವಿಸಿದ್ದೇಶ್ವರ ಮಠದ ಬಯಲ ಆವರಣದಲ್ಲಿ ನಡೆದ ಕರ್ನಾಟಕದ ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಬಸವಗೋಷ್ಠಿ ನಡೆಸಿಕೊಟ್ಟರು. ಕಲ್ಯಾಣದಲ್ಲಿ ಉದಯಿಸಿದ ಬೆಳಕು ಇಂದು ಜಗತ್ತನ್ನೇ ಬೆಳಗುತ್ತಿದೆ. ಕಲ್ಯಾಣದ ಬೆಳಕು ಕನ್ನಡದ ಬೆಳಕು. ಕನ್ನಡದ ಸಾಹಿತ್ಯ ಅಕ್ಷಯ ಸಾಹಿತ್ಯ. ಬಸವಣ್ಣ ಕನ್ನಡದ ಅಸ್ಮಿತೆ, ವಚನ ಸಾಹಿತ್ಯ ಕನ್ನಡದ ಅನನ್ಯತೆ ಎಂದರು.
ಕಲ್ಯಾಣ ಅಂದರೆ ಅದು ಕೇವಲ ಸ್ಥಳ ಅಲ್ಲ; ಪ್ರಭುತ್ವವನ್ನು ಪ್ರಶ್ನಿಸುವ ಎಲ್ಲ ಕಾರ್ಯವೂ ಅದು ಕಲ್ಯಾಣ; ಕಲ್ಯಾಣ ಕಾರ್ಯ ಎಂದು ತಿಳಿಯಬೇಕು ಎಂದರು. ಕೂಡಲ ಸಂಗಮನ ಗೋತ್ರ ಎಂದರೆ ಅದು ಮಾದರ ಚನ್ನಯ್ಯನ ಗೋತ್ರವೆಂದು ತಿಳಿಯಲು ಬಸವಣ್ಣ ಹೇಳುತ್ತಾರೆ. ಇಂತಹ ವೃತ್ತಿ ಘನತೆ, ಸಮಾನತೆಯು 12ನೇ ಶತಮಾನದಲ್ಲಿ ಕಲ್ಯಾಣದಲ್ಲಿತ್ತು. ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ ಎಂದು ಆಗಿನ ಶರಣರು ತಮ್ಮ ತಮ್ಮ ವೃತ್ತಿ ಮೂಲಕ ಗುರುತಿಸಿಕೊಳ್ಳುವ ಹಾಗೆ ವೃತ್ತಿಗೆ ಘನತೆಯನ್ನು ತಂದುಕೊಟ್ಟವರು ಬಸವಣ್ಣ ಎಂದರು. ಕೊಪ್ಪಳದ ಸಪ್ಪಳ ಅಂದರೆ ಅದು ಕನ್ನಡದ ಸಪ್ಪಳ. ಕೊಪ್ಪಳ ನೆಲದ ಬಗ್ಗೆ ಕವಿ ರನ್ನ ಹಾಡಿದ್ದಾನೆ. ಹಲವು ಧರ್ಮಗಳ ಬೀಡು ಕೊಪ್ಪಳ ಎಂದು ಅವರು ತಿಳಿಸಿದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 