ರಥಯಾತ್ರೆಗೆ ಸ್ವಾಗತ
ಯಮಕನಮರಡಿ ಃಬೋರಗಾಂವ ಅತೀಶಯ ಕ್ಷೇತ್ರದ ಆದಿಸಾಗರ ತಪೋಭೂಮಿಯ ಭದ್ರಗಿರಿ ಕೃತಿಯ ಜಲಮಂದಿರ ರಥವು ಇತ್ತೀಚೆಗೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ 1007 ಭಗವಾನ ಪಾಶ್ರ್ವನಾಥ ದಿಗಂಬರ ಜೈನ ಮಂದಿರಕ್ಕೆ ಆಗಮಿಸಿದಾಗ ಅಲ್ಲಿಯ ಜೈ ಜಿನವಾನಿ ಮಹಿಳಾ ಮಂಡಳದ ಸರ್ವಸದಸ್ಯರು ಹಾಗೂ ಜೈನ ಸಮುದಾಯದ ಎಲ್ಲ ಶ್ರಾವಕ-ಶ್ರಾವಕಿಯರು ಭಕ್ತಿಪೂರ್ವಕವಾಗಿ ಬರಮಾಡಿಕೊಂಡು ಪೂಜೆ ಸಲ್ಲಿಸಿ ಬೀಳ್ಕೋಡಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟ್ ಕಮೀಟಿ ಸರ್ವಸದಸ್ಯರು ಉಪಸ್ಥಿತರಿದ್ದರು