“ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದೇವೆ” – ರಷ್ಯಾ
ಮಾಸ್ಕೋ: ಜುಲೈ 18 : ಜಿ20 ಶೃಂಗಸಭೆಯಲ್ಲಿ ತಮ್ಮ ದೇಶ ಭಾಗವಹಿಸಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸೋಮವಾರ ಹೇಳಿದ್ದಾರೆ. ಆದರೆ, ದ್ವಿಪಕ್ಷೀಯ ಸಭೆಗಳಿಗೆ ಇನ್ನೂ ಯಾವುದೇ ರಾಷ್ಟ್ರದ ಒಪ್ಪಿಗೆ ಸಿಗದಿದ್ದರೂ ರಷ್ಯಾದ ಹೇಳಿಕೆ ಹೊರಬಿದ್ದಿದೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಪೆಸ್ಕೋವ್, “ವಾಸ್ತವವಾಗಿ ನಿಮ್ಗೆಲ್ಲ ಗೊತ್ತಿರುವಂತೆ G20ಗೆ ಸಂಬಂಧಿಸಿದಂತೆ ನಾವು ಶೃಂಗಸಭೆಯ ಸಿದ್ಧತೆಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸುತ್ತೇವೆ. ಸಾಮಾನ್ಯವಾಗಿ G20 ಸ್ವರೂಪಗಳಲ್ಲಿ ನಾವು ಭಾಗವಹಿಸುತ್ತೇವೆ. ನಮಗೆ ಶೃಂಗಸಭೆಗೆ ಆಹ್ವಾನವಿದೆ. ಯಾವುದೇ ಸಂದರ್ಭದಲ್ಲಾದ್ರೂ ಸಹ ಪಾಲ್ಗೊಳ್ಳುವಿಕೆ ಇದ್ದೆ ಇರುತ್ತದೆ. ಆದರೆ ದ್ವಿಪಕ್ಷೀಯ ಸಭೆಗಳ ವೇಳಾಪಟ್ಟಿಯನ್ನು ಇನ್ನೂ ರೂಪಿಸಲಾಗಿಲ್ಲ” ಎಂದು ತಿಳಿಸಿದರು.