ಅಂತರರಾಷ್ಟ್ರೀಯ

ಜಗತ್ತು ನೈತಿಕ ವೈಫಲ್ಯದ ಅಂಚಿನಲ್ಲಿ ನಿಂತಿದೆ.. ವಿಶ್ವ ಆರೋಗ್ಯ ಸಂಸ್ಥೆ

ಜಗತ್ತು  ನೈತಿಕ ವೈಫಲ್ಯದ ಅಂಚಿನಲ್ಲಿ ನಿಂತಿದೆ..  ವಿಶ್ವ ಆರೋಗ್ಯ ಸಂಸ್ಥೆ

ಜಿನೀವಾ, ಜ 18: ಕೊರೊನಾ ಲಸಿಕೆ  ಹಂಚಿಕೆಯ   ಮೇಲೆ   ಪ್ರಭಾವ ಬೀರುತ್ತಿರುವ  ಶ್ರೀಮಂತ-ಬಡವ  ಎಂಬ  ತಾರತಮ್ಯದ  ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತೀವ್ರ ಕಳವಳ ವ್ಯಕ್ತಪಡಿಸಿದೆ.  ಜಗತ್ತು ನೈತಿಕ ವೈಫಲ್ಯದ ಅಂಚಿನಲ್ಲಿ ನಿಂತಿದೆ ಎಂಬ  ಕಟು ಶಬ್ದಗಳಲ್ಲಿ  ಪರಿಸ್ಥಿತಿಯನ್ನು  ವಿಶ್ಲೇಷಿಸಿದೆ.  ಕೊರೊನಾ ಲಸಿಕೆಗಳ ಹಂಚಿಕೆ   ವಿಷಯದಲ್ಲಿ   ಸಮಾನ ನ್ಯಾಯ  ಪಾಲಿಸಬೇಕು ಎಂದು   ಲಸಿಕೆ ತಯಾರಕರು  ಹಾಗೂ  ಸರ್ಕಾರಗಳಿಗೆ   ಸೂಚಿಸಿದೆ.

‘ಕೊರೊನಾ ಲಸಿಕೆ  ವಿಷಯದಲ್ಲಿ’   ‘ಮೊದಲು  ನಮಗೆ ಬೇಕು’ ಎಂಬ ಮನೋಭಾವ  ಬಡ ದೇಶಗಳನ್ನು ಅಪಾಯಕ್ಕೆ  ತಳ್ಳುತ್ತಿದೆ.   ಇದರ   ಅಂತಿಮ ಪರಿಣಾಮ   ನಮ್ಮೆಲ್ಲರ ಸೋಲು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಥಾನಮ್ ವ್ಯಾಖ್ಯಾನಿಸಿದ್ದಾರೆ. ಈ ಮನಸ್ಥಿತಿಯಿಂದಾಗಿ  ಕೊರೊನಾ  ಬಿಕ್ಕಟ್ಟು ದೀರ್ಘಕಾಲದವರೆಗೆ ಮುಂದುವರಿಯಲಿದೆ   ಎಂದು ಅವರು ಎಚ್ಚರಿಸಿದ್ದಾರೆ. ಸೋಮವಾರ ನಡೆದ ಡಬ್ಲ್ಯುಎಚ್‌ ಒ ಕಾರ್ಯಕಾರಿ ಮಂಡಳಿ ಸಭೆಯ ಉದ್ಘಾಟನೆಯ ಸಂದರ್ಭದಲ್ಲಿ ಟೆಡ್ರೊಸ್ ಈ ಹೇಳಿಕೆ ನೀಡಿದ್ದಾರೆ.



ಸುದ್ದಿ ಓದಿ