ಜಾಗತಿಕವಾಗಿ 9 ಕೋಟಿ ದಾಟಿದ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆ
ವಾಷಿಂಗ್ಟನ್, ಜನವರಿ 21: ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 9 ಕೋಟಿ 60 ಲಕ್ಷ ದಾಟಿದ್ದು, 10 ಕೋಟಿ ಸನಿಹಕ್ಕೆ ಬರುತ್ತಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಹೊಸ ಮಾಹಿತಿ ತಿಳಿಸಿದೆ. ಈವರೆಗೆ ಸಾವಿನ ಸಂಖ್ಯೆ 2.07 ಮಿಲಿಯನ್‌ಗಿಂತಲೂ ಹೆಚ್ಚಾಗಿದೆ ವಿಶ್ವವಿದ್ಯಾಲಯದ ವರದಿ ತಿಳಿಸಿದೆ. ಎಸ್ಎಸ್ಇ ಪ್ರಕಾರ, ವಿಶ್ವದಲ್ಲೆ ಅತಿ ಹೆಚ್ಚು ಸೋಂಕು ಮತ್ತು ಸಾವಿನ ಪ್ರಕರಣಗಳಿಗೆ ಅಮೆರಿಕ ಸಾಕ್ಷಿಯಾಗಿದೆ. ನಂತರ ಭಾರತ ಎರಡನೇ ಸ್ಥಾನದಲ್ಲಿದೆ, 10,595,660,ಸೊಂಕು ಪ್ರಕಣ ವರದಿಯಾಗಿದ್ದು ಈವರೆಗೆ ದೇಶದಲ್ಲಿ ಸೋಂಕಿಗೆ ಮೃತಪಟ್ಟವರ 1ಲಕ್ಷದ 52,ಸಾವಿರ ದಾಟಿದೆ. ಇದರ ನಂತರ ಬ್ರೆಜಿಲ್ (8,638,249), ರಷ್ಯಾ (3,595,136), ಯುಕೆ (3,515,796), ಫ್ರಾನ್ಸ್ (3,023,661) ಎಂದು ಸಿಎಸ್‌ಎಸ್‌ಇ ಅಂಕಿಅಂಶಗಳು ಹೇಳಿವೆ. ಬ್ರೆಜಿಲ್ ಈವರೆಗೆ ಸೋಂಕಿಗೆ 2 ಲಕ್ಷದ 12,831 ಜನ ಮೃತಪಟ್ಟಿದ್ದು ಜಾಗತಿಕವಾಗಿ ಎರಡನೇ ಸ್ಥಾನ ಪಡೆದುಕೊಂಡಿದೆ. 30,ಸಾವಿರಕ್ಕಿಂತಲೂ ಹೆಚ್ಚಿನ ಸಾವಿನ ಸಂಖ್ಯೆ ಹೊಂದಿರುವ ದೇಶಗಳ ವಿವರ: ಮೆಕ್ಸಿಕೊ (144,371), ಯುಕೆ (93,469), ಇಟಲಿ (83,681), ಫ್ರಾನ್ಸ್ (71,792), ರಷ್ಯಾ (66,214), ಇರಾನ್ (57,057), ಸ್ಪೇನ್ (54,637) ಎಂದು ಹೊಸ ವರದಿ ಹೇಳಿದೆ.