ಅಂತರರಾಷ್ಟ್ರೀಯ

ಸರಣಿ ಭೂಕಂಪನ, ಬೆಚ್ಚಿಬಿದ್ದ ನ್ಯೂಜಿಲ್ಯಾಂಡ್ ಜನತೆ ….!!

ಸರಣಿ ಭೂಕಂಪನ, ಬೆಚ್ಚಿಬಿದ್ದ ನ್ಯೂಜಿಲ್ಯಾಂಡ್ ಜನತೆ ….!!

ವೆಲ್ಲಿಂಗ್ ಟನ್ , ಮಾ 5 : ನ್ಯೂಜಿಲ್ಯಾಂಡ್ ನ ಪೂರ್ವ ತೀರದಲ್ಲಿರುವ ನಾರ್ತ್ ಐಲ್ಯಾಂಡ್ ನಲ್ಲಿ ಸರಣಿ ಪ್ರಬಲ ಭೂಕಂಪನ, ಸುನಾಮಿಗೆ ಕಾರಣವಾಗಿದೆ.  ಬೆಚ್ಚಿಬಿದ್ದ ಜನರನ್ನು ಕಡಲ ತೀರದಿಂದ  ಎತ್ತರದ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ.ಒಂದೇ ಪ್ರದೇಶದ ಬಳಿ ಮೂರು ಬಾರಿ ಭೂಕಂಪನವಾಗಿದೆ. ಮೊದಲಿಗೆ 7.2, ನಂತರ 7.4 ಹಾಗೂ ಬಳಿಕ 8.1 ತೀವ್ರತೆಯಲ್ಲಿ ಸಂಭವಿಸಿದ ಕಂಪನದಿಂದ  ನ್ಯೂಜಿಲ್ಯಾಂಡ್ ಜನತೆ ಬೆಚ್ಚಿಬಿದ್ದಿದ್ದಾರೆ.  ಸಾವು ನೋವಿನ ಬಗ್ಗೆ ಈವರೆಗೆ,  ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ.ಸುನಾಮಿ ಅಲೆಗಳು ಸುಮಾರು ಮೂರು ಮೀಟರ್ ( 10 ಅಡಿ) ನಷ್ಟು ಎತ್ತರಕ್ಕೆ ಏಳಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಗಿಸ್ಬೋರ್ನ್ ನಗರದ ಈಶಾನ್ಯಕ್ಕೆ ಸುಮಾರು 174 ಕಿಲೋಮೀಟರ್ (108 ಮೈಲಿ) ದೂರದಲ್ಲಿ ಸಮುದ್ರದ 20.8 ಕಿಲೋಮೀಟರ್ (13 ಮೈಲಿ) ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದೆ.   ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.ಕೆಲ ದಿನಗಳ ಹಿಂದಷ್ಟೇ ಭೂಕಂಪನವಾಗಿದ್ದು  ಆಗಲೂ ಸುನಾಮಿ ಭೀತಿ ಎದುರಾಗಿತ್ತು.




ಸುದ್ದಿ ಓದಿ