ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಗ್ರಾಮಸ್ಥರು ತತ್ತರ; ನಾಲತವಾಡ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟದ ಎಚ್ಚರಿಕೆ
Villagers are upset over the irresponsibility of the officials; they have laid siege to the Nalathwa
ಮುದ್ದೇಬಿಹಾಳ 31 : ಗ್ರಾಮೀಣ ಭಾಗದಲ್ಲಿ ಟಿಸಿ (ವಿದ್ಯುತ್ ಪರಿವರ್ತಕ) ಸುಟ್ಟರೆ 24 ಗಂಟೆಯೊಳಗೆ ಬದಲಾಯಿಸಬೇಕು" ಎಂಬ ರಾಜ್ಯ ಸರ್ಕಾರದ ಗಡುವು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದೆಯೇ? ಇಂತಹದೊಂದು ಆಕ್ರೋಶದ ಪ್ರಶ್ನೆ ಈಗ ತಾಲ್ಲೂಕಿನ ಚವನಭಾವಿ ಗ್ರಾಮಸ್ಥರಿಂದ ಕೇಳಿಬರುತ್ತಿದೆ. ನಾಲತವಾಡ ಹೆಸ್ಕಾಂ ಅಧಿಕಾರಿಗಳ ಅಟ್ಟಹಾಸ ಮತ್ತು ಲೈನ್ ಮ್ಯಾನ್ ನಿರ್ಲಕ್ಷ್ಯದಿಂದಾಗಿ ಇಡೀ ಗ್ರಾಮವೇ ಕತ್ತಲಲ್ಲಿ ಮುಳುಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಗ್ರಾಮದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಹೊಸದೇನಲ್ಲ. ಕಳೆದ 15 ದಿನಗಳಿಂದ ಸರ್ಕಾರಿ ಶಾಲೆ ಮುಂದಿನ ಟಿಸಿಯಲ್ಲಿ ಪದೇ ಪದೇ ಡಿವಲ್ ಹೋಗುತ್ತಿತ್ತು. ಅದೀಗ ಸಂಪೂರ್ಣವಾಗಿ ಸುಟ್ಟು ಮೂರು ದಿನ ಕಳೆದಿದೆ. ಇನ್ನು ಗ್ರಾಮದ ಆಂಜನೇಯ ದೇವಸ್ಥಾನದ ಮುಂದಿನ ಮತ್ತೊಂದು ಟಿಸಿ ಸುಟ್ಟು ಬರೋಬ್ಬರಿ ಮೂರು ತಿಂಗಳು ಕಳೆದಿದೆ! ಆದರೂ ಹೆಸ್ಕಾಂ ಅಧಿಕಾರಿಗಳಿಗೆ ಮಾತ್ರ ಕಣ್ಣು ತರೆದಿಲ್ಲ.ತುಘಲಕ್ ದರ್ಬಾರ್: ಕುಡಿಯುವ ನೀರಿಗೂ ತತ್ವಾರ!ಬೇಸಿಗೆಯ ಬಿಸಿ ಇನ್ನೂ ಪೂರ್ತಿ ಇಳಿದಿಲ್ಲ. ಇಂತಹ ಸಂದರ್ಭದಲ್ಲಿ ಮೂರು ದಿನಗಳಿಂದ ಗ್ರಾಮದಲ್ಲಿ ಸಂಪೂರ್ಣ ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಗ್ರಾಮಸ್ಥರು ಕುಡಿಯುವ ನೀರಿಗೂ ಪರದಾಡುವಂತಾಗಿದೆ.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಸಾರ್ವಜನಿಕರ ಜೀವನದ ಜೊತೆ ಆಟವಾಡುತ್ತಿರುವ ನಾಲತವಾಡ ಹೆಸ್ಕಾಂ ಅಧಿಕಾರಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಲೈನ್ ಮ್ಯಾನ್ ನಾಪತ್ತೆ, ಅಧಿಕಾರಿಗಳ ಉಡಾಫೆ:ಚವನಭಾವಿ ಗ್ರಾಮದ ಲೈನ್ ಮ್ಯಾನ್ ತನಗೂ ಗ್ರಾಮಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದು, ಕರ್ತವ್ಯಕ್ಕೆ ಕಡುವೈರಿಯಾಗಿದ್ದಾನೆ. ಇನ್ನು ನಾಲತವಾಡ ಹೆಸ್ಕಾಂ ಶಾಖಾಧಿಕಾರಿಗಳಿಗೆ ಗ್ರಾಮಸ್ಥರು ಫೋನ್ ಮಾಡಿ ಗೋಗರೆದರೂ ಕನಿಷ್ಠ ಸೌಜನ್ಯಕ್ಕೂ ಸ್ಪಂದಿಸುತ್ತಿಲ್ಲ. ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದರೂ ಗ್ರಾಹಕರ ಕರೆಗಳಿಗೆ ಸಿಗದ ಅಧಿಕಾರಿಗಳ ವಿರುದ್ಧ ಸರ್ಕಾರ ತಕ್ಷಣ ಶಿಸ್ತುಕ್ರಮ ಕೈಗೊಳ್ಳಬೇಕಿದೆ.
ಸರಕಾರಕ್ಕೆ ನೇರ ಎಚ್ಚರಿಕೆ: ಉಗ್ರ ಹೋರಾಟದ ಹಾದಿ"ಅಧಿಕಾರಿಗಳ ಇಂತಹ ಬೇಜವಾಬ್ದಾರಿತನ ಹೀಗೆಯೇ ಮುಂದುವರಿದರೆ ನಾವು ಸುಮ್ಮನೆ ಕೂರುವುದಿಲ್ಲ. ತಕ್ಷಣವೇ ಚವನಭಾವಿ ಗ್ರಾಮಕ್ಕೆ ಹೊಸ ಟಿಸಿಗಳನ್ನು ಅಳವಡಿಸಿ ವಿದ್ಯುತ್ ಪೂರೈಕೆ ಸರಿಪಡಿಸದಿದ್ದರೆ, ಇಡೀ ಗ್ರಾಮಸ್ಥರು ಒಟ್ಟಾಗಿ ನಾಲತವಾಡ ಹೆಸ್ಕಾಂ ಶಾಖಾ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ" ಎಂದು ಗ್ರಾಮದ ಪ್ರಮುಖರು ಸರ್ಕಾರ ಹಾಗೂ ಹೆಸ್ಕಾಂ ಇಲಾಖೆಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಯಲ್ಲಪ್ಪ ಕಾರಕೂರ, ಹುಲಗಪ್ಪ ಬಿರಾದಾರ, ಮಧುಕುಮಾರ ಪಾಟೀಲ, ಹಣಮಂತ ಪೂಜಾರಿ, ಸೋಮು ಬಿರಾದಾರ, ಹುಸನಪ್ಪ ಗೋಗಿ, ಹಣಮಂತ ಕಾರಕೂರ, ಮುದಕಪ್ಪ ಮದರಿ, ಸಿದ್ದಪ್ಪ ಬಿರಾದಾರ, ಬಸವರಾಜ ಕುಂಬಾರ, ಸಣ್ಣಬಸಪ್ಪ ಕುಂಬಾರ, ಬಸಪ್ಪ ಬಿರಾದಾರ, ಲಕ್ಷ್ಮಣ್ಣ ಈಳಗೇರ, ರಾಮಣ್ಣ ಈಳಗೇರ ಹಾಗೂ ಮಾಜಿ ಗ್ರಾಪಂ ಸದಸ್ಯರಾದ ಯಮನಪ್ಪ ಚಲವಾದಿ, ಮರೆಪ್ಪ ಚಲವಾದಿ, ವಿರೇಶ ಚಲವಾದಿ, ಮೌನೇಶ ಚಲವಾದಿ ಸೇರಿದಂತೆ ಗ್ರಾಮದ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದು ಆಕ್ರೋಶ ಹೊರಹಾಕಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 