ನಿಖಿಲ ಕತ್ತಿಯವರ ಕೊರಳಿಗೆ ವಿಜಯಮಾಲೆ : ಹುಕ್ಕೇರಿಯಲ್ಲಿ ವಿಜಯೋತ್ಸವ
ಹುಕ್ಕೇರಿ 14; ಮೇ 10 ರಂದು ಜರುಗಿದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಮತದಾನದ ನಂತರ ಫಲಿತಾಂಶದ ಕಡೆಗೆ ಹುಕ್ಕೇರಿ ಮತಕ್ಷೇತ್ರದ ಜನ ಕಾತುರರಾಗಿದ್ದರು. ಇಂದು ಹೊರಬಂದ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾದ ನಿಖಿಲ ಕತ್ತಿಯವರು ವಿಜಯಶಾಲಿಗಳಾದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮದ ವಾತಾವರಣದಲ್ಲಿ ವಿಜಯೋತ್ಸವ ಆಚರಿಸಿದರು.
ಹುಕ್ಕೇರಿ ಮತಕ್ಷೇತ್ರ ಭಾರತೀಯ ಜನತಾ ಪಕ್ಷದ ಭದ್ರಕೋಟೆ.. ಅದನ್ನು ಛೀಧ್ರ ಪಡಿಸಲು ಕಾಂಗ್ರೇಸ ಪಕ್ಷ ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ನಿಖಿಲ ಕತ್ತಿ ಹಾಗೂ ಕಾಂಗ್ರೇಸ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ಎ.ಬಿ.ಪಾಟೀಲ ಇವರ ನಡುವೆ ತುರುಸಿನ ಸ್ವರ್ದೆ ನಡೆದಿತ್ತು. ಎರಡೂ ಪಕ್ಷಗಳು ಶಕ್ತಿ ಪ್ರದರ್ಶನದೊಂದಿಗೆ ಮತಯಾಚನೆ ಮಾಡಿದ್ದರು. ಇಬ್ಬರ ನಡುವೆ ನೇರ ಹಣಾಹಣಿ ಇದ್ದುದರಿಂದ ಯಾರು ಜಯಭೇರಿ ಭಾರಿಸಬಹುದೆಂಬ ಕುತೂಹಲವಿತ್ತು. ಮಾಜಿ ಸಚಿವರು ಹಾಗೂ ನಿಖಿಲ ಕತ್ತಿಯವರ ತಂದೆಯವರಾದ ದಿ. ಉಮೇಶ ಕತ್ತಿಯವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಈ ಬಾರಿ ಚುನಾವಣೆಯಲ್ಲಿ ಮತದಾರರು ನಿಖಿಲ ಕತ್ತಿಯವರನ್ನು ಆಶೀರ್ವದಿಸಿ ಮತ ಕ್ಷೇತ್ರದ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅನುವು ಮಾಡಿಕೊಟ್ಟಿದ್ದಾರೆ.
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಹೀನಾಯವಾಗಿ ಸೋಲನ್ನು ಕಂಡರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತ ಹಿನ್ನೆಲೆಯಲ್ಲಿ ಹುಕ್ಕೇರಿ ಮತಕ್ಷೇತ್ರದ ಕಾಂಗ್ರೆಸ ಕಾರ್ಯಕರ್ತರು ಸಂಭ್ರಮಾಚರಿಸಿದರು. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಗೆಲವು ಸಾಧಿಸಿದ್ದರಿಂದ ಬೈಕ್ ರಾ್ಯಲಿ, ಪಟಾಕ್ಷಿಗಳ ಸುರಿಮಳೆ, ಗುಲಾಲು ಹಾರಿಸುವದರ ಮೂಲಕ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು
ನಿಖಿಲ ಕತ್ತಿ ಮಾತನಾಡಿ ಅವರು ನಮ್ಮ ತಂದೆಯವರಂತೆ ನನ್ನನೂ ಕೂಡ ತಾವೆಲ್ಲರೂ ಚಿಕ್ಕ ವಯಸ್ಸಿನಲ್ಲಿ ಪ್ರಥಮ ಬಾರಿಗೆ ನನ್ನನ್ನೂ ಶಾಸಕರನ್ನಾಗಿ ಆಯ್ಕೆ ಮಾಡಿ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟದ್ದರಿಮ ಪ್ರತಮವಗಿ ತಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ತಾವು ನನ್ನ ಮೇಲಿಟ್ಟ ವಿಸ್ವಾಸಕ್ಕೆ ಎಂದಿಗೂ ಚ್ಯುತಿ ಬರದ ಹಾಗೆ ತಮ್ಮೆಲ್ಲರ ಸಹಕಾರದೋಂದಿಗೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂಬ ನನ್ನ ತಂದೆಯವರ ಕನಸನ್ನು ನನಸುಗೊಳಿಸುತ್ತೇನೆ. ಇನ್ನು ಯಾವದೇ ತಮ್ಮ ಸಮಸ್ಯೆಯನ್ನು ನೇರವಾಗಿ ನನ್ನ ಗಮನಕ್ಕೆ ತರಲು ತಿಳಿಸಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸುವದರ ಜೊತೆಗೆ ಕ್ಷೇತ್ರದಲ್ಲಿ ಮಂಜೂರಾದ ಅಡವಿಸಿದ್ಧೇಶ್ವರ ಹಾಗೂ ಶಂಕರಲಿಂಗ ಏತ ನೀರಾವರಿ ಯೋಜನೆಗಳನ್ನು ಶೀಘ್ರದಲ್ಲಿಯೇ .ಪೂರ್ಣಗೊಳಿಸುವದಾಗಿ ಆಶ್ವಾಸನೆ ನೀಡಿದರು. ಹೆಚ್ಚಿನ ಕ್ಯಗಾರಿಕೆಗಳನ್ನು ಸ್ಥಾಪಿಸಿ ಯುವಕರ ನಿರುದ್ಯೋಗ ಸಮಸ್ಯೆಯನ್ನು ದೂರುಗೊಳಿಸಲು ಪ್ರಯತ್ನಿಸಲಾಗುವದೆಂದರು.
ಇಂದು ಹುಕ್ಕೇರಿ ನಗರ ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ಯುವಕರು ದೊಡ್ಡ ಪ್ರಮಾಣದಲ್ಲಿ ಗುಲಾಲಿನಲ್ಲಿ ಮಿಂದು ಬಿಸಿಲಿನಲ್ಲಿಯೂ ಕುಣಿದು ಕುಪ್ಪಳಿಸಿದರು. ಕಾಂಗ್ರೇಸ ಪಕ್ಷ ಅಧಿಕಾರಕ್ಕೆ ಬರಲಿದ್ದು ಅವರು ತಮ್ಮ ಪ್ರಣಾಳಿಕೆಲ್ಲಿಯ ಎಷ್ಟು ಆಶ್ವಾಸಣೆಗಳನ್ನು ಈಡೇರಿಸಬಹುದೆಂಬ ಪ್ರತಿಕ್ಷೆಯಲ್ಲಿ ರಾಜ್ಯದ ಜನತೆಯಿದೆ. ಒಟ್ಟಾರೆ ಇಂದು ಪಟಾಕ್ಷಿಗಖ ಸುರಿಮಳೆಯಿಂದ ನಗರ ಪ್ರತಿಧ್ವನಿಸಿತು ಯಾವದೆ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಾಲೂಕಿನಲ್ಲಿ ಪೋಲಿಸ ಬಮದೋಬಸ್ತ ಮಾಡಲಾಗಿತ್ತು.