ವಿಜಯಪುರ

ಅಂಬಾಭವಾನಿ ದೇವಸ್ಥಾನದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮ

ಅಂಬಾಭವಾನಿ ದೇವಸ್ಥಾನದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮ

ಲೋಕದರ್ಶನ ವರದಿ 

ಕಲಕೇರಿ 08 : ಗ್ರಾಮದ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಶರನ್ ನವರಾತ್ರಿಯ ಪ್ರಯುಕ್ತ ಅ.11 ರಿಂದ ಅ.21 ರ ವರೆಗೆ ದೇವಿ ಪುರಾಣ ನಡೆಯಲಿದೆ ಅ.21 ರಂದು ಸುಮಂಗಲೆಯರಿಂದ ರಥೋತ್ಸವ ಮತ್ತು ಪುರಾಣ ಮಹಾಮಂಗಲೋತ್ಸವ, ಅ.22 ರಂದು ಧಾರ್ಮಿಕ ವಿಜಯಮಹೋತ್ಸವ ಹಾಗೂ ವಿವಿದ ಕ್ಷೇತ್ರಗಳ ಸಾಧಕರಿಗೆ  ಸನ್ಮಾನ  ಸೇರಿದಂತೆ ವಿವಿದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 

    ಅ.11 ರಂದು ರವಿವಾರ ಸಂಜೆ 7 ಘಂಟೆಗೆ ಘಟಸ್ಥಾಪನೆ ಹಾಗೂ ಪುರಾಣ ಪ್ರಾರಂಭೋತ್ಸವ ನಡೆಯಲಿದೆ. ಮಾಗಣಗೇರಿಯ ಡಾ.ವಿಶ್ವಾರಾಧ್ಯ ಶಿವಾಚಾರ್ಯರು ಸಾನಿಧ್ಯವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕಲಕೇರಿ ಗರುಮರುಳಾರಾಧ್ಯರ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು, ಪಂಚರಂಗ ಸಂಸ್ಥಾನ ಗದ್ದುಗೆಮಠದ ಗರುಮಡಿವಾಳೇಶ್ವರ ಶಿವಾಚಾರ್ಯರು ಉಪಸ್ಥಿತರಿರುವರು, ಹಿರೂರಿನ ಜಯಸಿದ್ದೇಶ್ವರ ಶಿವಾಚಾರ್ಯರು ಪ್ರವಚನವನ್ನು ನೀಡುವರು, ಕಾಶಿನಾಥಸ್ವಾಮಿ  ಜಾಲಹಳ್ಳಿಮಠ ಅಧ್ಯಕ್ಷತೆವಹಿಸುವರು, ಸದಾನಂದ ಹಿರೇಮಠ ನೇತೃತ್ವವಹಿಸುವರು, ಅಂಬ್ರೇಷ ನಗನೂರ ಮತ್ತು ಚಂದ್ರಶೇಖರ ಹೂಗಾರ ಬಿಸನಾಳ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದು, ಮೃತ್ಯುಂಜಯ ಮಠಪತಿ ಪೂಜಾ ಕೈಂಕರ್ಯ ನಡೆಸಲಿದ್ದಾರೆ. 


ಸುದ್ದಿ ಓದಿ