ಅಂಬಾಭವಾನಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
ಲೋಕದರ್ಶನ ವರದಿ
ಕಲಕೇರಿ 09: ಗ್ರಾಮದ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಶರನ್ ನವರಾತ್ರಿಯ ಪ್ರಯುಕ್ತ ಅ.11 ರಿಂದ ಅ.21 ರ ವರೆಗೆ ದೇವಿ ಪುರಾಣ ನಡೆಯಲಿದೆ ಅ.21 ರಂದು ಸುಮಂಗಲೆಯರಿಂದ ರಥೋತ್ಸವ ಮತ್ತು ಪುರಾಣ ಮಹಾಮಂಗಲೋತ್ಸವ, ಅ.22 ರಂದು ಧಾರ್ಮಿಕ ವಿಜಯಮಹೋತ್ಸವ ಹಾಗೂ ವಿವಿದ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸೇರಿದಂತೆ ವಿವಿದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅ.11 ರಂದು ರವಿವಾರ ಸಂಜೆ 7 ಘಂಟೆಗೆ ಘಟಸ್ಥಾಪನೆ ಹಾಗೂ ಪುರಾಣ ಪ್ರಾರಂಭೋತ್ಸವ ನಡೆಯಲಿದೆ. ಮಾಗಣಗೇರಿಯ ಡಾ.ವಿಶ್ವಾರಾಧ್ಯ ಶಿವಾಚಾರ್ಯರು ಸಾನಿಧ್ಯವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕಲಕೇರಿ ಗರುಮರುಳಾರಾಧ್ಯರ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು, ಪಂಚರಂಗ ಸಂಸ್ಥಾನ ಗದ್ದುಗೆಮಠದ ಗರುಮಡಿವಾಳೇಶ್ವರ ಶಿವಾಚಾರ್ಯರು ಉಪಸ್ಥಿತರಿರುವರು, ಹಿರೂರಿನ ಜಯಸಿದ್ದೇಶ್ವರ ಶಿವಾಚಾರ್ಯರು ಪ್ರವಚನವನ್ನು ನೀಡುವರು, ಕಾಶಿನಾಥಸ್ವಾಮಿ ಜಾಲಹಳ್ಳಿಮಠ ಅಧ್ಯಕ್ಷತೆವಹಿಸುವರು, ಸದಾನಂದ ಹಿರೇಮಠ ನೇತೃತ್ವವಹಿಸುವರು, ಅಂಬ್ರೇಷ ನಗನೂರ ಮತ್ತು ಚಂದ್ರಶೇಖರ ಹೂಗಾರ ಬಿಸನಾಳ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದು, ಮೃತ್ಯುಂಜಯ ಮಠಪತಿ ಪೂಜಾ ಕೈಂಕರ್ಯ ನಡೆಸಲಿದ್ದಾರೆ. ಅ.21 ರಂದು ಬೆಳಿಗ್ಗೆ ದೇವಿ ಮೂರ್ತಿಗೆ ಅಭಿಷೇಕ, ನಂತರ 8 ಘಂಟೆಗೆ ದೇವಿಯ ರಜತ ಮೂರ್ತಿಯ ಭವ್ಯ ಅಡ್ಡ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಾಜಾ ಭಜಂತ್ರಿ, ವಿವಿದ ವಾಧ್ಯಮೇಳ, ಕುಂಭ ಕಳಸಾರತಿಯೊಂದಿಗೆ ಜರುಗುವದು, ನಂತರ ಮಧ್ಯಾಹ್ನ ಒಂದು ಘಂಟೆಗೆ ಮಹಾ ಪ್ರಸಾದ ಜರುಗುವದು, ಸಂಜೆ 5 ಘಂಟೆಗೆ ವಿಶೇಷವಾಗಿ ಸುಮಂಗಲೆಯರಿಂದ ರಥೋತ್ಸವ ನಡೆಯಲಿದ್ದು, ನಂತರ ಪುರಾಣ ಮಹಾಮಂಗಲೋತ್ಸವ ಜರುಗಲಿದೆ. ಅ.22 ರಂದು ಗುರುವಾರ ಸಂಜೆ 6:30 ಕ್ಕೆ ಭವಾನಿ ದೇವಸ್ಥಾನದ ಪೆಂಽಽ ರಾಜಶೇಖರ್ ಕಡಕೋಳ ವೇದಿಕೆಯಲ್ಲಿ ಧಾರ್ಮಿಕ ವಿಜಯ ಮಹೋತ್ಸವ, ವಿವಿದ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಉಜ್ಜಯನಿ ಪೀಠದ ಶ್ರೀಮದ್ ಸದ್ಧರ್ಮ ಸಿಂಹಾಸನಾಧೀಶ್ವರ 1008 ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಂಗಳವರು ಪಾವನ ಸಾನಿಧ್ಯವಹಿಸಲಿದ್ದು, ಮಾಗಣಗೇರಿ ಡಾ.ವಿಶ್ವಾರಾಧ್ಯ ಶಿವಾಚಾರ್ಯರು ಸಾನಿಧ್ಯ ವಹಿಸುವರು. ನಾಡಿನ ಅನೇಕ ಸ್ವಾಮೀಜಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವರು, ಇದೆ ವೇಳೆ ವಿವಿದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವದು ಎಂದು ದೇವಿ ಉಪಾಸಕರಾದ ಮೋತಿಲಾಲ್ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.