ಮೇ.27ರಂದು ಲೋಕ ಕಲ್ಯಾಣಾರ್ಥ ದುರ್ಗಾ ಹೋಮ, ಸಪ್ತಶತೀ ಪಾರಾಯಣ
ಮುಧೋಳ 26: ನಗರದ ತಿಲಕ ಯೂತ್ ಫೌಂಡೇಶನ್ ಟ್ರಸ್ಟ್ ವತಿಯಿಂದ ಇಲ್ಲಿನ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪ ಆವರಣದಲ್ಲಿ ಮೇ.27ರಂದು ಬೆಳಿಗ್ಗೆ 10-00 ಘಂಟೆಯಿಂದ ಸಂಜೆ 6 ಗಂಟೆಯವರೆಗೆ ಸ್ವರ್ಣಪೀಠಿಕಾಪುರ ಗೌರಿಗದ್ದೆ ಶ್ರೀ ಅವಧೂತ ವಿನಯ ಗುರೂಜಿ ದಿವ್ಯಸಾನಿಧ್ಯದಲ್ಲಿ ಧಾರ್ಮಿಕ ಸಭೆ ಜರುಗುವುದು ಎಂದು ತಿಲಕ ಯೂತ್ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಸಾಗರಸಿಂಗ್ ರಜಪೂತ ಹೇಳಿದರು.
ಗುರುವಾರ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಲ್ಲಿಯವರೆಗೆ ನೆರೆ ಹಾವಳಿ ಹಾಗೂ ಕರೋನಾ ವೇಳೆಯಲ್ಲಿ ಹಲವಾರು ಸಾಮಾಜಿಕ ಕಾರ್ಯಮಾಡಿದ್ದು ಇದೇ ಮೊದಲ ಬಾರಿಗೆ ನಾವು ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದಲ್ಲಿ ಸ್ವರ್ಣಪೀಠಿಕಾಪುರ ಗೌರಿಗದ್ದೆ ಶ್ರೀ ಅವಧೂತ ವಿನಯ ಗುರೂಜಿ ಹಾಗೂ ಪ್ರಕರ ವಾಗ್ನಿ ಕು.ಚೂತ್ರಾ ಕುಂದಾಪೂರ ನೇತೃತ್ವದಲ್ಲಿ ಬೆಳಿಗ್ಗೆ 10-00ಕ್ಕೆ ಕಳಸ ಪ್ರತಿಷ್ಠೆ,ದುರ್ಗಾ ಹೋಮ,ಮದ್ಯಾಹ್ನ 12ಕ್ಕೆ ಪೂರ್ಣಾಹುತಿ,3-00ಕ್ಕೆ ಸಪ್ತಶಸತೀ ಪಾರಾಯಣ, 5-45ಕ್ಕೆ ಶ್ರೀ ಅವಧೂತ ವಿನಯ ಗುರೂಜಿಯವರಿಂದ ಮಹಾಮಂಗಳಾರತಿ, ಸಂಜೆ 6ಕ್ಕೆ ಧಾರ್ಮಿಕ ಸಭೆಯಲ್ಲಿ ಗುರೂಜಿ ಆಶಿರ್ವಚನ ನೀಡುವರು ಜೊತೆಗೆ ಹಿರೇಕೇರಿಯಲ್ಲಿ ಸಸಿನೆಡುವ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ಜರುಗುವದು ಈ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಕಿರಣ ಗಣಪ್ಪಗೋಳ,ವಿಜಯ ಮಹಾಂತೇಶ ಪಟಗುಂದಿ,ಆಕಾಶ ಪೂಜಾರಿ,ಅಮೀತ ಹಾಸೀಲಕರ,ಸುರಜ್ ರಜಪೂತ,ಗೀರೀಶ ಬಾಗಿ,ಮಹಾಂತೇಶ ಬ್ಯಾಕೋಡ,ಮಲ್ಲು ಕಾಬಿ,ಕೃಷ್ಣಾ ಸುಲಾಖೆ ಇದ್ದರು.
ಪೋಟೋ;ಎಮ್ಡಿಎಲ್-26-1; ತಿಲಕ ಯೂತ್ ಫೌಂಡೇಶನ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾಗರಸಿಂಗ್ ರಜಪೂತ ಧಾರ್ಮಿಕ ಸಭೆಯ ಪ್ರಚಾರ ಸಾಮರ್ಗಿ ಬಿಡುಗಡೆ ಮಾಡಿದರು.