ಅಂತರರಾಷ್ಟ್ರೀಯ

ಜೂನ್‌ ವೇಳೆಗೆ ಮಕ್ಕಳಿಗೂ ಲಸಿಕೆ .. ಜರ್ಮನ್‌ ಔಷಧಿ ಸಂಸ್ಥೆ ಮಹತ್ವದ ಹೇಳಿಕೆ

ಜೂನ್‌ ವೇಳೆಗೆ   ಮಕ್ಕಳಿಗೂ ಲಸಿಕೆ .. ಜರ್ಮನ್‌ ಔಷಧಿ  ಸಂಸ್ಥೆ ಮಹತ್ವದ ಹೇಳಿಕೆ

ಬರ್ಲಿನ್‌,  ಏ  30:   ಪ್ರಸ್ತುತ ಪ್ರಪಂಚದಾದ್ಯಂತ  ಕೊರೊನಾ   ಎರಡನೇ    ಅಲೆ  ವೇಗವಾಗಿ   ವ್ಯಾಪಿಸುತ್ತಿದೆ.  ಮೇ 1 ರಂದು ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ  ಕೊರೊನಾ  ಲಸಿಕೆ   ಅಭಿಯಾನ  ಆರಂಭವಾಗಲಿದೆ.  ಆದರೆ, ಯುರೋಪ್‌ನಲ್ಲಿ  12 ರಿಂದ 15 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುವುದು  ಎಂದು ಜರ್ಮನಿಯ ಔಷಧಿ ಕಂಪನಿ ಬಯೋನೋಟೆಕ್ ಹೇಳಿದೆ. 

ಈಗಾಗಲೇ  ಹಲವು   ಲಕ್ಷ   ಜೀವಗಳನ್ನು ಬಲಿ ತೆಗೆದುಕೊಂಡಿರುವ  ಕೊರೊನಾ  ಸಾಂಕ್ರಾಮಿಕ    ಈಗ ಪುಟ್ಟ  ಮಕ್ಕಳತ್ತ ತನ್ನ ʼಕಬಂಧಬಾಹುʼಚಾಚುತ್ತಿದೆ    ಇದರಿಂದ  ಬಯೋನೋಟೆಕ್ ಈ ನಿರ್ಧಾರ ಕೈಗೊಂಡಿದೆ.  ಜರ್ಮನ್ ಔಷಧ ಕಂಪನಿ ಬಯೋನೋಟೆಕ್,  ಫಿಜರ್ ಲಸಿಕೆ 12-15 ವರ್ಷ ವಯಸ್ಸಿನ ಮಕ್ಕಳ ಮೇಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು  ಹೇಳಿದೆ. ಮಾರ್ಚ್ ಅಂತ್ಯದ ವೇಳೆಗೆ, 2,260  ಮಂದಿ ಅಮೆರಿಕ  ಸ್ವಯಂಸೇವಕರ  ಮೇಲೆ  ಪರೀಕ್ಷೆ ನಡೆಸಲಾಗಿದೆ. ಮಕ್ಕಳಲ್ಲಿ  ಕೊರೊನಾ  ತಡೆಗಟ್ಟಲು ಫಿಜರ್ ಲಸಿಕೆ ಪರಿಣಾಮಕಾರಿ ಎಂದು ಈ ಅಧ್ಯಯನಗಳು ತೋರಿಸಿವೆ.

ಚಿಕ್ಕ ಮಕ್ಕಳಿಗೆ   ಫಿಜರ್ ಲಸಿಕೆ   ತುಂಬಾ ಸುರಕ್ಷಿತವಾಗಿದೆ ಎಂದು ಬಯೋನೆಟೆಕ್ ಹೇಳಿದೆ. ಶಾಲೆಗೆ ಹೋಗುವ ಮಕ್ಕಳಿಗೆ,  12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ  ಹಾಕುವುದು  ಅತ್ಯಂತ  ಮುಖ್ಯವಾಗಿದೆ ಎಂದು ಹೇಳಿದೆ.  ಈ ಸಂಬಂಧ  ಅನುಮೋದನೆಗಾಗಿ ಯುಎಸ್‌ಎಫ್‌ಡಿಎ, ಯುರೋಪಿಯನ್ ನಿಯಂತ್ರಕರಿಗೆ ವರದಿ ಸಲ್ಲಿಸಲಾಗಿದೆ ಎಂದು ಫಿಜರ್ ಸಿಇಓ ಎರ್ಲಾಬ್ ಬೌರ್ಲಾ ಹೇಳಿದ್ದಾರೆ.  ಈ ಲಸಿಕೆ 12-15 ವರ್ಷ ವಯಸ್ಸಿನ ಮಕ್ಕಳಲ್ಲಿ  ಶೇ 100ರಷ್ಟು   ಪರಿಣಾಮಕಾರಿ ಎಂದು ಹೇಳಿದ್ದಾರೆ.  ಈವರೆಗೆ   ಲಸಿಕೆ ಕುರಿತು   ಪ್ರಯೋಗಗಳನ್ನು ನಡೆಸಲಾಗಿದ್ದು, ಅವುಗಳಿಗೆ  ಸಂಬಂಧಿಸಿ   ಆಧಾರಗಳನ್ನು ಸಲ್ಲಿಸಲಾಗಿದೆ. ಲಸಿಕೆ ಜೂನ್ ವೇಳೆಗೆ  ಚಿಕ್ಕ ಮಕ್ಕಳಿಗೆ ಲಭ್ಯವಾಗಲಿದೆ. ಪ್ರಸ್ತುತ  ಹಲವು ಲಸಿಕೆ ತಯಾರಕರು ಮಕ್ಕಳಿಗೆ ಲಸಿಕೆ ತಯಾರಿಸಲು  ಪೈಪೋಟಿ  ನಡೆಸುತ್ತಿವೆ.  ಅಮೆರಿಕಾ ಕಂಪನಿ ಮಾಡರ್ನಾ ಕೂಡ ಸಂಶೋಧನೆ ನಡೆಸುತ್ತಿದೆ.  ಅಸ್ಟ್ರಾಜೆನಿಕಾ ಕೂಡಾ 6-17 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ತಯಾರಿಸಲು ಕಳೆದ ತಿಂಗಳು ಸಂಶೋಧನೆ  ಆರಂಭಿಸಿದೆ ಎಂದು ಅವರು ಹೇಳಿದರು.

6 ತಿಂಗಳ ಮಗುವಿಗೆ ಸಹ ..

ಅಮೆರಿಕಾದ  ಔಷಧಿ  ಕಂಪನಿಗಳು ಇತ್ತೀಚೆಗೆ ಫಿಜರ್, ಮೊಡಾರ್ನಾ ಲಸಿಕೆಗಳ ಬಗ್ಗೆ ಸಂಶೋಧನೆ ನಡೆಸಿವೆ. ಪೋಷಕರ ಒಪ್ಪಿಗೆಯೊಂದಿಗೆ 6 ತಿಂಗಳ ಶಿಶುಗಳಿಗೂ ಮೇಲೂ  ಲಸಿಕೆ  ಪರೀಕ್ಷಿಸಲಾಗಿದೆ. ಹೊಸ ಲಸಿಕೆಗಳು  ನವಜಾತ ಶಿಶುಗಳಿಗೆ   ಪರಿಣಾಮಕಾರಿ ಎಂದು ಎರಡೂ ಕಂಪನಿಗಳು ಹೇಳುತ್ತವೆ. ಈ ಸಂಬಂಧ  ಎರಡನೇ ಹಂತದ ಟ್ರಯಲ್ ರನ್ ಕೂಡ ಪ್ರಾರಂಭವಾಗಿದೆ.   ಇದರಲ್ಲಿ 5,000 ಮಕ್ಕಳ  ಮೇಲೆ  ಸಂಶೋಧನೆ ನಡೆಸಲಿದ್ದಾರೆ.  ಪರೀಕ್ಷೆಗಳು ಯಶಸ್ವಿಯಾದರೆ ಶೀಘ್ರದಲ್ಲೇ ಲಸಿಕೆ ಮಾರುಕಟ್ಟಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಗಳು ತಿಳಿಸಿವೆ. ಈ ನಿಟ್ಟಿನಲ್ಲಿ, ಮಾಡರ್ನಾ ತನ್ನ ಸಂಶೋಧನೆಯನ್ನು ಎರಡು  ಹಂತದಲ್ಲಿ ನಡೆಸಿದೆ. ಮೊದಲ ಹಂತದಲ್ಲಿ, 2-12 ವರ್ಷ ವಯಸ್ಸಿನ ಮಕ್ಕಳಿಗೆ ಎರಡು ಪ್ರಮಾಣದಲ್ಲಿ ಲಸಿಕೆ ನೀಡಲಾಗುವುದು.  ಪ್ರತಿ  ಲಸಿಕೆ ಪ್ರಮಾಣ 50 ಅಥವಾ 100 ಮೈಕ್ರೊಗ್ರಾಂ ಎಂದು ಕಂಪನಿ ತಿಳಿಸಿದೆ. ಎರಡನೇ ಭಾಗದಲ್ಲಿ 25, 50, 100 ಮೈಕ್ರೊ ಗ್ರಾಂ  ಎರಡು ವರ್ಷಗಳಿಗಿಂತೆ  ಚಿಕ್ಕಮಕ್ಕಳಿಗೆ  ನೀಡಲಾಗುವುದು  ಎಲ್ಲಾ ಮುನ್ನೆಚ್ಚರಿಕೆಗಳ  ನಡುವೆ ಸಂಶೋಧನೆ ನಡೆಸುತ್ತಿದೆ ಎಂದು ಕಂಪನಿ ತಿಳಿಸಿದೆ.

ಸುದ್ದಿ ಓದಿ