ಅಂತರರಾಷ್ಟ್ರೀಯ

ಕಾಬೂಲ್ ನಿಂದ ಕಜಕಿಸ್ತಾನಕ್ಕೆ ವಿಶ್ವಸಂಸ್ಥೆ ಸಿಬ್ಬಂದಿ ತಾತ್ಕಾಲಿಕ ಸ್ಥಳಾಂತರ

ಕಾಬೂಲ್ ನಿಂದ ಕಜಕಿಸ್ತಾನಕ್ಕೆ ವಿಶ್ವಸಂಸ್ಥೆ ಸಿಬ್ಬಂದಿ ತಾತ್ಕಾಲಿಕ ಸ್ಥಳಾಂತರ

ವಾಷಿಂಗ್ಟನ್, ಆಗಸ್ಟ್ 19: ತಾಲಿಬಾನ್ ಹಿಡಿತದಲ್ಲಿರುವ ಅಫಘಾನಿಸ್ತಾನದ ಪರಿಸ್ಥಿತಿ ಹದಗೆಟ್ಟಿದೆ.  ಈ ಹಿನ್ನೆಲೆಯಲ್ಲಿ, ವಿಶ್ವಸಂಸ್ಥೆಯ ಸಿಬ್ಬಂದಿಗೆ ಉಂಟಾಗಬಹುದಾದ ಅಪಾಯವನ್ನು ತಗ್ಗಿಸಲು ಕಾಬೂಲ್‌ನಿಂದ ಕಜಕಿಸ್ತಾನಕ್ಕೆ ತಾತ್ಕಾಲಿಕವಾಗಿ ಸಿಬ್ಬಂದಿ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ಬುಧವಾರ ತಿಳಿಸಿದ್ದಾರೆ. 

 "ನಾವು ಮಾತನಾಡುತ್ತಿದ್ದಂತೆ ವಿಶ್ವಸಂಸ್ಥೆ ಸಿಬ್ಬಂದಿಯ ಒಂದು ತಂಡ ಇಂದು ಕಾಬೂಲ್‌ನಿಂದ ಕಜಕಿಸ್ತಾನದ ಅಲ್ಮಾಟಿಗೆ ಪ್ರಯಾಣಿಸುತ್ತಿದೆ, ಅಲ್ಲಿಂದಲೇ ಅವರು ತಮ್ಮ ಕೆಲಸವನ್ನು ದೂರದಿಂದಲೇ ಮುಂದುವರಿಸುತ್ತಾರೆ" ಎಂದು ಡುಜಾರಿಕ್ ಹೇಳಿದ್ದಾರೆ.

 "ಇದು ಅಫ್ಘಾನಿಸ್ತಾನದ ಜನರಿಗೆ ಕನಿಷ್ಠ ಅಡಚಣೆಯೊಂದಿಗೆ ವಿಶ್ವಸಂಸ್ಥೆ ಸಹಾಯವನ್ನು ತಲುಪಿಸಲು ಮತ್ತು ಅದೇ ಸಮಯದಲ್ಲಿ ವಿಶ್ವಸಂಸ್ಥೆ ಸಿಬ್ಬಂದಿಗೆ ಅಪಾಯವನ್ನು ಕಡಿಮೆ ಮಾಡಲು ಸಾಧ್ಯವಾಗುವಂತೆ ಮಾಡುವ ತಾತ್ಕಾಲಿಕ ಕ್ರಮವಾಗಿದೆ." ಎಂದಿದ್ದಾರೆ.

ಕಜಕ್ ವಿದೇಶಾಂಗ ಸಚಿವಾಲಯವು ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಸಹಾಯ ಮಿಷನ್ (UNAMA) ಮತ್ತು ಇತರ ಹಲವಾರು ವಿಶ್ವಸಂಸ್ಥೆ ಏಜೆನ್ಸಿಗಳನ್ನು ಅಫ್ಘಾನಿಸ್ತಾನದಿಂದ ಅಲ್ಮಾಟಿಗೆ ತಾತ್ಕಾಲಿಕವಾಗಿ ಮರು ನಿಯೋಜಿಸಲಾಗಿದೆ ಎಂದು ಬುಧವಾರ ದೃಢಪಡಿಸಿದೆ. 

"ವಿಶ್ವಸಂಸ್ಥೆಯೊಂದಿಗೆ ಕಜಕಿಸ್ತಾನ ಸಂಸ್ಥೆಯ ಪೂರ್ಣ ಪ್ರಮಾಣದ ಸದಸ್ಯರಾಗಿ, ಬದ್ಧತೆಯ ಭಾಗವಾಗಿ, ಅಧ್ಯಕ್ಷ ಕಸ್ಸಿಮ್ ಜೋಮಾರ್ಟ್ ಟೊಕಾಯೆವ್ ಅವರು ವಿಶ್ವಸಂಸ್ಥೆ ವಿನಂತಿಯನ್ನು ಪೂರೈಸಲು ನಿರ್ಧರಿಸಿದರು" ಎಂದು ಕಜಕ್ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

ಸಂಬಂಧಿತ ಕಜಕ್ ಅಧಿಕಾರಿಗಳು ಪ್ರಸ್ತುತ ವಿಶ್ವಸಂಸ್ಥೆಯ ರಾಜತಾಂತ್ರಿಕರಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ, ಆದರೆ, ಅವರ ನಿಯೋಜನೆಯು ತಾತ್ಕಾಲಿಕವಾಗಿರುತ್ತದೆ, "ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸ್ಥಿರವಾಗುವವರೆಗೆ" ಸುಮಾರು ಆರು ತಿಂಗಳುಗಳು"ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ. 

ಸುದ್ದಿ ಓದಿ