ಹುಕ್ಕೇರಿ

ಶ್ರೀ ಮಹಾಲಕ್ಷ್ಮಿ ದ್ಯಾಮವ್ವಾ ದೇವಿಗೆ ಉಡಿ ತುಂಬಿ ಯುಗಾದಿ ಆಚರಣೆ

ಶ್ರೀ ಮಹಾಲಕ್ಷ್ಮಿ ದ್ಯಾಮವ್ವಾ ದೇವಿಗೆ ಉಡಿ ತುಂಬಿ ಯುಗಾದಿ ಆಚರಣೆ

ಹುಕ್ಕೇರಿ 20: ಪಟ್ಟಣದ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿ ವತಿಯಿಂದ ವಿವಿಧ ವಿಧಿ ವಿಧಾನ ದೊಂದಿಗೆ  ಪೂಜೆ  ಜರುಗಿದವು  ಪ್ರತಿ ವರ್ಷದಂತೆ ಈ ವರ್ಷವೂ ಸಹ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯಮಿ  ಯುಗಾದಿ ಹಬ್ಬದ ನಿಮಿತ್ಯ, ಗುರುವಾರ ಮುಂಜಾನೆ 9 ಗಂಟೆಗೆ ಶ್ರೀ ಮಹಾಲಕ್ಷ್ಮೀ ದ್ಯಾಮವ್ವದೇವಿಯ ಮಂದಿರಕ್ಕೆ ತೆರಳಿ ವಿದ್ಯುಕ್ತವಾಗಿ ಪೂಜೆ ಪುನಸ್ಕಾರ ಸಲ್ಲಿಸಿ ಹೊಸ ಸೀರೆ ರವಿಕೆ ತೊಡಿಸಿ ಉಡಿ ತುಂಬುವ ಕಾರ್ಯಕ್ರಮ ಜರುಗಿತು ಹಾಗೂ ಶ್ರೀ ಲಕ್ಷ್ಮೀದೇವಿ  ಲಗಮವ್ವದೇವಿ  ಮಂದಿರಕ್ಕೆ ತೆರಳುವುದು ಹಾಗೂ ಅಲ್ಲಿಯೂ ವಿದ್ಯುಕ್ತವಾಗಿ ಪೂಜೆ ಪುನಸ್ಕಾರ ಸಲ್ಲಿಸಿ, ಹೊಸ ಸೀರೆ ರವಿಕೆ ತೊಡಿಸಿ ಉಡಿ ತುಂಬುವ ಕಾರ್ಯಕ್ರಮ ಜರುಗಿತು . ವಾದ್ಯ ಮೇಳದೊಂದಿಗೆ ಶ್ರೀ ರಥಕ್ಕೆ ಅದರ ನಿಗದಿತ ಸ್ಥಳಕ್ಕೆ ಇರಿಸಲಾಯಿತು ಎಲ್ಲಾ ಹಕ್ಕುದಾರರು,

ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು,  ಕಾರ್ಯದರ್ಶಿಗಳು, ಸರ್ವ ಸದಸ್ಯರು ಹಾಗೂ ಪಂಚರು, ಹಿರಿಯರು, ಭಕ್ತಾದಿಗಳು, ಹುಕ್ಕೇರಿ ಪಟ್ಟಣದ ಸಮಸ್ತ ಸಾರ್ವಜನಿಕರು ಆಗಮಿಸಿ ಯಶಸ್ವಿಗೊಳಸಿದ ತಮ್ಮೆಲ್ಲರಿಗೂ ಪವಿತ್ರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು, ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಾಪು ಸಾಹೇಬ್ ನಾಯಕ್ ಮಲ್ಲಿಕಾರ್ಜುನ್ ನಾಯಕ್ ಜೈ ಗೌಡ ಪಾಟೀಲ್ ಗುರುರಾಜ ಕುಲಕರ್ಣಿ ಪಿಂಟು ಶೆಟ್ಟಿ , ಸುಭಾಷ್ ನಾಯಕ್  ಆನಂದ್ ತುಬಚಿ  ಉದಯ್ ಮಕ್ಕಳಕಿ ಬಸವರಾಜ್ ದುಂಡಗಿ  ರಾಜಕುಮಾರ್ ಅಳವಾಡೆ  ಜಯಾನಂದ್ ಹಿರೇಮಠ  ಮಹೇಶ್ ಮುದುಕನ್ನವರ್ ಪ್ರಕಾಶ್ ಗುಡಶಿ  ಆನಂದ್ ಗಂಧ  ಚೆನ್ನಪ್ಪ ಗಜಬರ್  ಬಸವರಾಜ್ ಪಟ್ಟಣಶೆಟ್ಟಿ  ಮಲ್ಲಪ್ಪ ಗಜಬರ್  ಸುನಿಲ್ ಲಾಳಗೆ  ಸಾತ್ವಿಕ ಹಿರೇಮಠ  ಆರಾಧ್ಯ ಮುದುಕನವರ್ ಹಾಗೂ ಸ್ಥಳೀಯ ಜನರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು 


ಸುದ್ದಿ ಓದಿ