ಅಂತರರಾಷ್ಟ್ರೀಯ

ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್‌ ಪ್ರಮಾಣವಚನ ಸ್ವೀಕಾರಕ್ಕೆ ದಿನಗಣನೆ: ದೇಶಾದ್ಯಂತ ಬಿಗಿ ಭದ್ರತೆ

ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್‌ ಪ್ರಮಾಣವಚನ ಸ್ವೀಕಾರಕ್ಕೆ ದಿನಗಣನೆ: ದೇಶಾದ್ಯಂತ ಬಿಗಿ ಭದ್ರತೆ

ವಾಷಿಂಗ್ಟನ್‌, ಜ 18:ಅಮೆರಿಕದ  ನೂತನ  ಅಧ್ಯಕ್ಷ  ಜೋ ಬೈಡನ್, ಜ 20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ದೇಶಾದ್ಯಂತ ಬಿಗಿ ಭದ್ರತೆ  ನಿಯೋಜಿಸಲಾಗಿದೆ.ಇನ್ನು 2 ದಿನಗಳಲ್ಲಿ ನಿರ್ಗಮಿಸಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ದೇಶದ 50ಕ್ಕೂ ಹೆಚ್ಚು ರಾಜ್ಯಗಳಲ್ಲಿ  ಪ್ರತಿಭಟನೆ ನಡೆಸಲು ಸಜ್ಜಾಗಿರುವ  ಹಿನ್ನೆಲೆಯಲ್ಲಿ,  ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಲಾಕ್ ಡೌನ್ ಕೂಡ ಜಾರಿಗೊಳಿಸಲಾಗಿದೆ.ಶ್ವೇತ ಭವನದ ಸುತ್ತಮುತ್ತಲಿನ ರಸ್ತೆಗಳ  ಸಂಚಾರವನ್ನು  ನಿರ್ಬಂಧಿಸಲಾಗಿದ್ದು, ಪ್ರಮಾಣ ವಚನ ಸ್ವೀಕಾರ ಸ್ಥಳದಲ್ಲಿನ ಭದ್ರತೆಯನ್ನು ಹೆಚ್ಚಿಸಲಾಗಿದೆ.ಮಿಚಿಗನ್ , ವರ್ಜಿನಿಯಾ , ವಾಷಿಂಗ್ಟನ್ ಸೇರಿದಂತೆ ಹಲವು  ರಾಜ್ಯಗಳ  ರಾಜಧಾನಿಗಳಲ್ಲಿ  ಫೆಡರಲ್  ಭದ್ರತಾ ಪಡೆಗಳ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.  



ಸುದ್ದಿ ಓದಿ