ಅಂತರರಾಷ್ಟ್ರೀಯ

ಭಾರತದ ಕರೋನ ಸೋಂಕಿಗೆ ಅಮೆರಿಕ ಲಸಿಕೆ ಬಳಕೆ ಪರಿಣಾಮಕಾರಿ ಮದ್ದು..!

ಭಾರತದ  ಕರೋನ ಸೋಂಕಿಗೆ ಅಮೆರಿಕ ಲಸಿಕೆ ಬಳಕೆ ಪರಿಣಾಮಕಾರಿ ಮದ್ದು..!

ವಾಷಿಂಗ್ಟನ್ , ಮೇ 18: ಅಮೆರಿಕದಲ್ಲಿ ಪ್ರಸ್ತುತ ಕರೋನ ನಿಗ್ರಹಕ್ಕಾಗಿ ಬಳಕೆಯಾಗುತ್ತಿರುವ  ಫೈಜರ್   ಮತ್ತು ಮೆಡ್ರಿನ  ಲಸಿಕೆಗಳು ಭಾರತದಲ್ಲಿ ಕಾಣಿಸಿಕೊಂಡ ರೂಪಾಂತರಿ ಹೊಸ ಕೊರೋನಾ  ಸೋಂಕು ಪ್ರಬೇದವನ್ನು  ಪರಿಣಾಮಕಾರಿಯಾಗಿ ಎದುರಿಸುವ ಶಕ್ತಿ ಹೊಂದಿದೆ. 

ಅಮೆರಿಕದ ನ್ಯೂಯಾರ್ಕ್ ವಿಶ್ವವಿದ್ಯಾಲಯ  ಪ್ರಕಟಿಸಿರುವ ಸಂಶೋಧನಾ ಪ್ರಬಂಧದಲ್ಲಿ  ಈ ಅಂಶ ಬಹಿರಂಗವಾಗಿದೆ.  

ಭಾರತದಲ್ಲಿ ಕಾಣಿಸಿಕೊಂಡಿರುವ ಹೊಸ  ರೂಪಾಂತರಿಕರೋನ ಸೋಂಕಿನ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ  ವ್ಯಕ್ತಪಡಿಸಿದೆ.  ಅಮೆರಿಕದ  ಎರಡು ಲಸಿಕೆಗಳು ಹೊಸ ರೂಪಾಂತರಿ ಕೊರೋನಾ ಸೋಂಕಿ ವಿರುದ್ದ ಹೋರಾಡುವ  ಶಕ್ತಿಯನ್ನು ಪಡೆದುಕೊಂಡಿದೆ ಎಂದು ಹೇಳಲಾಗಿದ್ದರು  ಈ ವಿಚಾರದಲ್ಲಿ ಮತ್ತಷ್ಟು ಸಂಶೋಧನೆ ನಡೆಯಬೇಕು ಎಂಬುದನ್ನು ವಿಶ್ವ  ಆರೋಗ್ಯ ಸಂಸ್ಥೆ ಹೇಳಿದೆ.

ಎರಡು ಲಸಿಕೆಗಳು ಶೇಕಡ 95ರಷ್ಟು ಯಶಸ್ವಿಯಾಗಿದ್ದು ಇವುಗಳು ರೂಪಾಂತರ ಕೊರೋನಾ ಸೋಂಕು ನಿವಾರಿಸುವ ಶಕ್ತಿಯಿದೆಎಂಬುದು  ವಿಶ್ವವಿದ್ಯಾಲಯದ ಸಂಶೋಧನಾ ಪ್ರಬಂಧಗಳಲ್ಲಿ  ಪ್ರಸ್ತಾಪವಾಗಿದೆ. ಭಾರತದಲ್ಲಿ ಕಾಣಿಸಿಕೊಂಡಿರುವ  ಎರಡನೇ ಅಲೆಯ ಸೊಂಕು ಅತ್ಯಂತ  ವೇಗವಾಗಿ ಹಬ್ಬುವ ಶಕ್ತಿ ಪಡೆದುಕೊಂಡಿದೆ ಎಂದೂ ಸಹ ಹೇಳಲಾಗಿದೆ. 

ಸುದ್ದಿ ಓದಿ