ಅಂತರರಾಷ್ಟ್ರೀಯ

ಜನರ ಮೂಲಭೂತ ಹಕ್ಕು ರಕ್ಷಿಸಿದರೆ ಮಾತ್ರ ಹೊಸ ಅಫ್ಘನ್‌ ಸರ್ಕಾರಕ್ಕೆ ಅಮೆರಿಕಾ ಬೆಂಬಲ

ಜನರ ಮೂಲಭೂತ ಹಕ್ಕು ರಕ್ಷಿಸಿದರೆ ಮಾತ್ರ ಹೊಸ ಅಫ್ಘನ್‌ ಸರ್ಕಾರಕ್ಕೆ  ಅಮೆರಿಕಾ ಬೆಂಬಲ

ವಾಷಿಂಗ್ಟನ್‌, ಆಗಸ್ಟ್‌ 1: ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸಿ,    ಅಫ್ಘನ್‌   ನಾಗರೀಕರ   ಮೂಲ ಭೂತ ಹಕ್ಕುಗಳನ್ನು  ಮೊಟಕುಗೊಳಿಸುವ  ಕ್ರಮಗಳಿಗೆ  ಮುಂದಾದರೆ        ಅಫ್ಘಾನಿಸ್ತಾನದ     ನೂತನ  ತಾಲಿಬಾನ್‌   ಸರ್ಕಾರವನ್ನು    ತಾನು ಯಾವುದೇ  ಕಾರಣಕ್ಕೂ     ಬೆಂಬಲಿಸುವುದಿಲ್ಲ   ಅಮೆರಿಕಾ    ವಿದೇಶಾಂಗ  ಇಲಾಖೆ ವಕ್ತಾರ ನೆಡ್‌  ಪ್ರೈಸ್‌  ಹೇಳಿದ್ದಾರೆ.

"ಭವಿಷ್ಯದ  ಅಫ್ಘಾನಿಸ್ತಾನ  ಸರ್ಕಾರ   ತನ್ನ  ನಾಗರೀಕರ  ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುತ್ತದೆ, ಅದು  ಭಯೋತ್ಪಾದಕರಿಗೆ  ಆಶ್ರಯ ನೀಡುವುದಿಲ್ಲ  ಎಂಬ  ಆಶಯ  ವ್ಯಕ್ತಪಡಿಸಿರುವ  ಅಮೆರಿಕಾ,     ಮಹಿಳೆಯರು,  ಬಾಲಕಿಯರು  ಸೇರಿದಂತೆ   ತನ್ನ  ನಾಗರೀಕರ    ಮೂಲಭೂತ  ಹಕ್ಕುಗಳನ್ನು ರಕ್ಷಿಸಲು  ಕ್ರಮ ಕೈಗೊಂಡರೆ    ಅಂತಹ   ಸರ್ಕಾರದೊಂದಿಗೆ   ತಾನು  ಕೆಲಸ ಮಾಡಲು ಸಾಧ್ಯವಾಗಲಿದೆ   ಎಂದು    ನೆಡ್‌ ಪ್ರೈಸ್‌  ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.  " ಈ ಮೂಲ ಭೂತ ಕಾರ್ಯಗಳನ್ನು  ಮಾಡದ ಸರ್ಕಾರವನ್ನು ನಾವು   ಎಂದಿಗೂ  ಬೆಂಬಲಿಸುವುದಿಲ್ಲ ಎಂದು  ಅವರು ಸ್ಪಷ್ಟಪಡಿಸಿದ್ದಾರೆ.

ಸುದ್ದಿ ಓದಿ