ಅಂತರರಾಷ್ಟ್ರೀಯ

ಅಮೆರಿಕ ಸೈನಿಕರು ಸೆಪ್ಟೆಂಬರ್ 11 ರೊಳಗೆ ದೇಶ ತೊರೆಯಲಿ: ತಾಲಿಬಾನ್

ಅಮೆರಿಕ ಸೈನಿಕರು ಸೆಪ್ಟೆಂಬರ್ 11 ರೊಳಗೆ ದೇಶ ತೊರೆಯಲಿ: ತಾಲಿಬಾನ್

  ಲಂಡನ್, ಆಗಸ್ಟ್ 17 : ಅಫಘಾನಿಸ್ತಾನದಲ್ಲಿರುವ ಅಮೆರಿಕ ಸೈನಿಕರ ಮೇಲೆ ದಾಳಿ ನಡೆಸುವುದಿಲ್ಲ, ಆದರೆ ಮುಂದಿನ ತಿಂಗಳ 11ರೊಳಗೆ ದೇಶ ತೊರೆಯಬೇಕು ಎಂದು ತಾಲಿಬಾನ್ ತಿಳಿಸಿದೆ.

  ತಾಲಿಬಾನ್ ಸಂಘಟನೆಯು ಅಮೆರಿಕ ಸೇನಾಪಡೆಯ ಮೇಲೆ ದಾಳಿ ಮಾಡುವ ಯಾವ ಉದ್ದೇಶವನ್ನೂ ಹೊಂದಿಲ್ಲ.  ಆದರೆ ಸೆಪ್ಟೆಂಬರ್ 11 ರೊಳಗೆ ಅಫ್ಘಾನಿಸ್ತಾನದಿಂದ ಎಲ್ಲಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಹೇಳಿದ್ದಾರೆ. 

  ಸ್ವತಃ ಅಮೆರಿಕ ಸರ್ಕಾರವೇ ಎಲ್ಲಾ ಸೇನಾಪಡೆ ಹಿಂಪಡೆಯುವುದಾಗಿ ಈಗಾಗಲೇ ಘೋಷಿಸಿದ್ದು, ಅದರಂತೆ ಸೆಪ್ಟೆಂಬರ್ 11 ರೊಳಗೆ ತಮ್ಮ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹೊರಹಾಕಬೇಕು ನಾವು ಅವರ ಮೇಲೆ ದಾಳಿ ಮಾಡಿಲ್ಲ" ಎಂದು ಶಾಹೀನ್ ತಿಳಿಸಿದ್ದಾರೆ.

ಸುದ್ದಿ ಓದಿ