ಚುನಾವಣಾ ಪ್ರತಿಭಟನೆ, ಪೊಲೀಸರಿಂದ 13 ಜನರ ಬಂಧನ
ವಾಷಿಂಗ್ಟನ್, ಜನವರಿ 7 :ದೇಶದ ರಾಜಧಾನಿಯಲ್ಲಿ ನಡೆದ ಚುನಾವಣಾ ಪ್ರತಿಭಟನೆಗೆ ಸಂಬಂಧಪಟ್ಟಂತೆ ಪೊಲೀಸರು 13 ಜನರನ್ನು ಬಂಧಿಸಿ, ಐದು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಿಷಯವನ್ನು ವಾಷಿಂಗ್ಟನ್ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ ಮುಖ್ಯಸ್ಥ ರಾಬರ್ಟ್ ಕಾಂಟೀ ಸುದ್ದಿಗಾರರಿಗೆ ತಿಳಿಸಿದರು.ಘಟನೆಗೆ ಸಂಬಂಧಪಟ್ಟಂತೆ 5 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ, ಸದ್ಯ 13 ಜನರನ್ನು ಬಂಧಿಸಲಾಗಿದೆ ಎಂದು ಕಾಂಟೀ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಬಂಧಿತ ವ್ಯಕ್ತಿಗಳೆಲ್ಲರೂ ವಾಷಿಂಗ್ಟನ್ ಡಿ.ಸಿ.ಗೆ ಹತ್ತಿರದ ಉಪನಗರಗಳು, ಇತರೆ ರಾಜ್ಯಗಳಿಗೆ ಸೇರಿದವರಾಗಿದ್ದಾರೆ ಎಂದು ಅವರು ಹೇಳಿದರು .