ಉತ್ತರಾಖಂಡ ಪ್ರವಾಹ, ಪ್ರಾಣಹಾನಿ ಬಗ್ಗೆ ಅಮೆರಿಕ ಆಘಾತ
ವಾಷಿಂಗ್ಟನ್, ಫೆಬ್ರವರಿ 9 :ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮನದಿ ಸ್ಫೋಟದಿಂದ ಸಂಭವಿಸಿದ ಪ್ರಾಣಹಾನಿ ಬಗ್ಗೆ ಅಮೆರಿಕ ತೀವ್ರ ಆಘಾತ ವ್ಯಕ್ತಪಡಿಸಿದೆ. ಈ ಸವಾಲಿನ ಸಂಕಷ್ಟ ಸಮಯದಲ್ಲಿ ನಮ್ಮ ಚಿಂತನೆಗಳು ಭಾರತೀಯ ಸ್ನೇಹಿತರು ಮತ್ತು ಪಾಲುದಾರರೊಂದಿಗೆ ಇರುತ್ತವೆ, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ಮತ್ತು ಸ್ನೇಹಿತರಿಗೆ ಸಂತಾಪ ಸಲ್ಲಿಸುವುದಾಗಿ, ಮತ್ತು ಗಾಯಾಳುಗಳ ತ್ವರಿತ ಚೇತರಿಕೆಗಾಗಿ ಆಶಿಸುವುದಾಗಿ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿ ಹಿಮನದಿ ಪ್ರಕೋಪದಿಂದಾಗಿ ಇನ್ನೂ 171 ಜನರು ಕಾಣೆಯಾಗಿದ್ದಾರೆ, ಇದರಲ್ಲಿ ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೂ ಸೇರಿದ್ದಾರೆ. ವಿವಿಧ ಸ್ಥಳಗಳಿಂದ ಈವರೆಗೆ 26 ಜನರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್ ತಿಳಿಸಿದ್ದಾರೆ. ಸೇನೆ ವಾಯುಪಡೆ, ಐಟಿಬಿಪಿ ಮತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಒಳಗೊಂಡ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ಮುಂದುವರೆದಿವೆ.