ಚಿಕಾಗೊ ಹೋಟೆಲ್‌ನಲ್ಲಿ ಗುಂಡಿನ ದಾಳಿ, ಒಬ್ಬನ ಸಾವು
ವಾಷಿಂಗ್ಟನ್, ಫೆಬ್ರವರಿ 7:ಅಮೆರಿಕದ ಚಿಕಾಗೋ ಉಪನಗರದ ಹೋಟೆಲ್‌ವೊಂದರಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇತರೆ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ಐದನೇ ಮಹಡಿಯಲ್ಲಿ ಗುಂಡು ಹಾರಿಸಲಾಗಿದೆ. ಎಂದು ಬ್ಲೂಮಿಂಗ್ ಡೇಲ್ ಪೊಲೀಸ್ ಇಲಾಖೆ ತಿಳಿಸಿದೆ. ಅನೇಕ ಗುಂಡೇಟಿನಿಂದ ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮೃತನನ್ನು ಜೇಮ್ಸ್ ಮೆಕ್‌ಗಿಲ್ ಜೂನಿಯರ್, 27 ಎಂದು ಗುರುತಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.