ಅಂತರರಾಷ್ಟ್ರೀಯ

ಹಿಂಸಾಚಾರಕ್ಕೆ ಟ್ರಂಪ್ ಕುಮ್ಮಕ್ಕು, ಬರಾಕ್ ಒಬಾಮಾ ವಾಗ್ದಾಳಿ

ಹಿಂಸಾಚಾರಕ್ಕೆ ಟ್ರಂಪ್ ಕುಮ್ಮಕ್ಕು, ಬರಾಕ್  ಒಬಾಮಾ ವಾಗ್ದಾಳಿ

 ವಾಷಿಂಗ್ಟನ್, ಜನವರಿ 7: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನವೆಂಬರ್ 3  ಚುನಾವಣೆಯ ಫಲಿತಾಂಶದ ಬಗ್ಗೆ ನಿರಂತರವಾಗಿ ಸುಳ್ಳು ಹೇಳುತ್ತಾ  ದೇಶದಲ್ಲಿ  ಹಿಂಸಾಚಾರ ಪ್ರಚೋದಿಸುತ್ತಿದ್ದಾರೆ ಎಂದು  ಮಾಜಿ ಅಧ್ಯಕ್ಷ ಬರಾಕ್ ಒಬಾಮ ತೀವ್ರ ವಾಗ್ದಾಳಿ ಮಾಡಿದ್ದಾರೆ. ಕ್ಯಾಪಿಟೋಲ್‌ನಲ್ಲಿ ಇಂದಿನ ಹಿಂಸಾಚಾರವನ್ನು ಇತಿಹಾಸವು ಸರಿಯಾಗಿ ನೆನಪಿಸಿಕೊಳ್ಳುತ್ತದೆ, ಕಾನೂನುಬದ್ಧ ಚುನಾವಣೆಯ ಫಲಿತಾಂಶದ ಬಗ್ಗೆ ಆಧಾರರಹಿತವಾಗಿ ಸುಳ್ಳು ಹೇಳಿ ರಾಷ್ಟ್ರಕ್ಕೆ ಅಪಮಾನ ಮಾಡಿದ್ದಾರೆ ಎಂದು ಅವರು ದೂರಿದರು.  ಮಾಜಿ ಅಧ್ಯಕ್ಷರ ಪ್ರಕಾರ, ರಿಪಬ್ಲಿಕನ್ ನಾಯಕರು ತಮ್ಮ ಬೆಂಬಲಿಗರಿಗೆ ಚುನಾವಣೆಯ ಬಗ್ಗೆ ಸತ್ಯ ಹೇಳಲುಇಷ್ಟವಿಲ್ಲ ಎಂದು ಒಬಾಮ ಹೇಳಿದರು. ಮಾಜಿ ಅಧ್ಯಕ್ಷರು,  ರಿಪಬ್ಲಿಕನ್ ನಾಯಕರು ಸತ್ಯವನ್ನು ನಿರ್ಲಕ್ಷಿಸುವ ಹಾದಿಯನ್ನು ಮುಂದುವರಿಸಬೇಕು ಅಥವಾ ವಾಸ್ತವವನ್ನು ಆಯ್ಕೆಮಾಡಿಕೊಳ್ಳಬೇಕು  ಎಂದೂ ಒಬಾಮ ಹೇಳಿದರು. 



ಸುದ್ದಿ ಓದಿ