ಅಂತರರಾಷ್ಟ್ರೀಯ

ನ್ಯೂಯಾರ್ಕ್ ನಲ್ಲೂ ರೂಪಾಂತರಿ ಕೊರೋನ ಸೋಂಕು ಪತ್ತೆ , ಜನತೆಯಲ್ಲಿ ತಲ್ಲಣ...

ನ್ಯೂಯಾರ್ಕ್ ನಲ್ಲೂ  ರೂಪಾಂತರಿ ಕೊರೋನ ಸೋಂಕು ಪತ್ತೆ , ಜನತೆಯಲ್ಲಿ  ತಲ್ಲಣ...

ವಾಷಿಂಗ್ಟನ್, ಜನವರಿ 5 :  ಬ್ರಿಟನ್ನಿನಲ್ಲಿ  ಕಂಡು ಬಂದಿರುವ ಹೊಸ ರೂಪಾಂತರಿ ಕೊರೋನ ಸೋಂಕು ಅಮೆರಿಕದ  ನ್ಯೂಯಾರ್ಕ್ ರಾಜ್ಯದಲ್ಲಿ ಪತ್ತೆಯಾಗಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ ಪತ್ತೆಯಾದ ಹೊಸ ಪ್ರಭೇದ  ರೂಪಾಂತರಿಯ ಮೊದಲ ಪ್ರಕರಣವನ್ನು ಪತ್ತೆ ಮಾಡಲಾಗಿದೆ ಎಂದು ರಾಜ್ಯಪಾಲ ಆಂಡ್ರ್ಯೂ ಕ್ಯುಮೊ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.ನ್ಯೂಯಾರ್ಕ್ ರಾಜ್ಯ ಮೊದಲ ರೂಪಾಂತರಿ ಪ್ರಕರಣವನ್ನು ದೃಡಪಡಿಸಿದೆ.  ಎಂದು ಕ್ಯುಮೊ ಸೋಮವಾರ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ಆದರೂ  ಸೋಂಕಿತ ವ್ಯಕ್ತಿಗೆ ಯಾವುದೇ ಪ್ರಯಾಣದ ಇತಿಹಾಸವಿಲ್ಲ ಎಂದರು.   ಯುಕೆ ರೂಪಾಂತರಿ ಸೋಂಕು  ಕನಿಷ್ಠ ಮೂರು  ರಾಜ್ಯಗಳಲ್ಲಿ ಪತ್ತೆಯಾಗಿರುವುದು ದೇಶದ ಜನತೆ ಆತಂಕಕ್ಕೆ ಕಾರಣವಾಗಿದೆ. 



ಸುದ್ದಿ ಓದಿ