ಪ್ಯಾರಿಸ್ ಒಪ್ಪಂದಕ್ಕೆ ಮರುಸೇರ್ಪಡೆ, ಮುಸ್ಲಿಮರ ವಿರುದ್ಧದ ಪ್ರಯಾಣ ನಿಷೇಧ ನೀತಿ ತೆರವು ಪ್ರಕಟಿಸಿದ ಜೋ ಬೈಡನ್
ವಾಷಿಂಗ್ಟನ್, ಜ.21 : ಪ್ಯಾರಿಸ್ ಒಪ್ಪಂದಕ್ಕೆ ಮರುಸೇರ್ಪಡೆ, ‘ಮುಸ್ಲಿಮರ ಪ್ರಯಾಣ ನಿಷೇಧ ನೀತಿ’ ತೆರವು, ವಿಶ್ವ ಆರೋಗ್ಯ ಸಂಸ್ಥೆಗೆ ಮರು ಸೇರ್ಪಡೆ ಸೇರಿದಂತೆ ಮಹತ್ವದ ಕಾರ್ಯಾದೇಶಗಳಿಗೆ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಸಹಿ ಹಾಕಿದ್ದಾರೆ.ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜೋ ಬೈಡನ್ ಅವರು ಈ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.ಕೊರೋನ ವೈರಸ್ ಸಾಂಕ್ರಾಮಿಕ, ಜನಾಂಗೀಯ ಅಸಮಾನತೆ ಸಮಸ್ಯೆ ನಿವಾರಿಸುವ ಕುರಿತ ಕಾರ್ಯಾದೇಶಗಳಿಗೂ ಬೈಡನ್ ಬುಧವಾರ ಸಹಿ ಮಾಡಿದರು. ಇವು ಹಿಂದಿನ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರ ನೀತಿಗಳಿಗೆ ವಿರುದ್ಧವಾದ ನೀತಿಗಳಾಗಿವೆ.ಮುಸ್ಲಿಮರ ಪ್ರಯಾಣ ನಿರ್ಬಂಧ ನೀತಿಯಿಂದಾಗಿ ಮುಸ್ಲೀಮರು ಬಹುಸಂಖ್ಯಾತರಾಗಿರುವ ದೇಶಗಳ ಪ್ರಯಾಣಿಕರ ಅಮೆರಿಕ ಪ್ರಯಾಣವನ್ನು ‘ಮುಸ್ಲಿಮರ ಪ್ರಯಾಣ ನಿಷೇಧ ನೀತಿ’ ನಿರ್ಬಂಧಿಸಿತ್ತು. ಇದೀಗ ಈ ನೀತಿಯಿಂದ ತೊಂದರೆ ಅನುಭವಿಸಿದ ಪ್ರದೇಶದವರಿಗೆ ವೀಸಾ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಕ್ರಮ ವಲಸಿಕರನ್ನು ಪತ್ತೆ ಮಾಡಿ ಗಡಿಪಾರು ಮಾಡುವ ಟ್ರಂಪ್ ಸರ್ಕಾರದ ಕ್ರಮಕ್ಕೆ ತಡೆಯೊಡ್ಡಿರುವ ಬೈಡನ್, ಮೆಕ್ಸಿಕೊ ಗಡಿಯುದ್ದಕ್ಕೂ ನಿರ್ಮಿಸಲು ಯೋಜಿಸಿದ್ದ ಗೋಡೆ ಕಾಮಗಾರಿಗೆ ‘ತಕ್ಷಣದ ಮುಕ್ತಾಯ’ ಘೋಷಿಸಿದ್ದಾರೆ. ಪ್ಯಾರಿಸ್ ಒಪ್ಪಂದಕ್ಕೆ ಮರುಸೇರ್ಪಡೆ ಹಾಗೂ ವಲಸಿಗ ನಿರಾಶ್ರಿತರ ರಕ್ಷಣೆಗೂ ಕ್ರಮ ಕೈಗೊಂಡಿದ್ದಾರೆ.ನಾನು ಅಮೆಕರಿಕ ಎಲ್ಲ ವರ್ಗ, ಜನತೆಯ ಅಧ್ಯಕ್ಷ, ಇದು ಕೇವಲ ಒಬ್ಬ ವ್ಯಕ್ತಿ ಗೆಲುವಲ್ಲ, ಬದಲಾಗಿ ಪ್ರಜಾಫ್ರಭುತ್ವದ ಗೆಲುವು ಎಂದು ನೂತನ ಅಧ್ಯಕ್ಷ ಜೋಬೈಡೆನ್ ಹೇಳಿದ್ದಾರೆ.
ಛಿದ್ರಗೊಂಡ ಆರ್ಥಿಕತೆ ಮತ್ತು ನಾಲ್ಕು ಲಕ್ಷಕ್ಕೂ ಅಧಿಕ ಅಮೆರಿಕನ್ನರ ಅಮೂಲ್ಯ ಜೀವ ಬಲಿತೆಗೆದುಕೊಂಡ ಕೊರೊನಾ ಸೋಂಕಿನಿಂದ ತೀವ್ರ ವಿಭಜನೆಯಾಗಿರುವ ದೇಶದಲ್ಲಿನ ಅನಾಗರಿಕ ಯುದ್ಧವನ್ನು ಅಂತ್ಯಗೊಳಿಸುವುದಾಗಿ ಜೋ ಬೈಡನ್ ಶಪಥ ಮಾಡಿದ್ದಾರೆ.ಭವಿಷ್ಯದ ಅಮೆರಿಕವನ್ನು ಭದ್ರಪಡಿಸಲು ಮಾತಿಗಿಂತಲೂ ಹೆಚ್ಚಿನ ಪ್ರಯತ್ನ, ಶ್ರಮದ ಅಗತ್ಯವಿದೆ. ಅದಕ್ಕೆ ಪ್ರಜಾಪ್ರಭುತ್ವವು ಒಳಗೊಳ್ಳುವ ಎಲ್ಲ ಅಂಶಗಳೂ ಅಗತ್ಯವಾಗಿದೆ ಎಂದರು.'ನಾವು ನೀಲಿ ವಿರುದ್ಧದ ಕೆಂಪು ಬಣ್ಣದ (ರಿಪಬ್ಲಿಕ್ ವರ್ಸಸ್ ಡೆಮಾಕ್ರಟಿಕ್), ಗ್ರಾಮೀಣ ವರ್ಸಸ್ ನಗರ, ಸಾಂಪ್ರದಾಯಿಕತೆ ವರ್ಸಸ್ ಉದಾರವಾದಗಳ ನಡುವಿನ ಅನಾಗರಿಕ ಯುದ್ಧವನ್ನು ಅಂತ್ಯಗೊಳಿಸಬೇಕಿದೆ. ನಮ್ಮ ಹೃದಯ ಗಟ್ಟಿಗೊಳಿಸುವ ಬದಲು ನಮ್ಮ ಆತ್ಮಗಳನ್ನು ತೆರೆದರೆ ಮಾತ್ರ ಇದು ಸಾಧ್ಯವಾಗಲಿದೆ ಎಂದೂ ಹೇಳಿದರು.ವಲಸೆಗೆ ಸಂಬಂಧಿಸಿ ಸಮಗ್ರವಾದ ನೀತಿಯ ಕಾಯ್ದೆಯನ್ನು ಸಂಸತ್ತಿನಲ್ಲಿ ಮಂಡಿಸುವುದು ಬೈಡನ್ ಅವರು ಅಧ್ಯಕ್ಷರಾಗಿ ಕೈಗೊಳ್ಳುವ ಆರಂಭಿಕ ಕ್ರಮಗಳಲ್ಲಿ ಒಂದು ಎಂದು ಶ್ವೇತ ಭವನದ ಹೊಸ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ.ಅಧ್ಯಕ್ಷರ ಮೊದಲ ಟ್ವೀಟ್ ಬೈಡನ್ ಅಧ್ಯಕ್ಷರಾದ ಬಳಿಕ ಮಾಡಿರುವ ಮೊದಲ ಟ್ವೀಟ್‌ನಲ್ಲಿ, ಸಮಯ ವ್ಯರ್ಥ ಮಾಡದೆ ಕೆಲಸ ಮಾಡುವ ಭರವಸೆ ನೀಡಿದ್ದಾರೆ. ‘ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಯ ವ್ಯರ್ಥಮಾಡಲಾಗದು. ಅಮೆರಿಕ ಕುಟುಂಬದವರಿಗೆ ತಕ್ಷಣದ ಪರಿಹಾರ ಮತ್ತು ಸಮರ್ಥ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಅಧಿಕಾರ ಪಡೆಯುವುದಕ್ಕಾಗಿ ಇಂದು ಓವಲ್ ಕಚೇರಿಗೆ ತೆರಳುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.