ಯುಪಿ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ: ಪ್ರಮುಖ ಆರೋಪಿ ಸೆರೆ
ಲಕ್ನೋ, ಜನವರಿ 8 : ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣ ನೆನಪಿಸುವಂತಹ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿ ಪೊಲೀಸರು ಕೊನೆಗೂ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನೆನಪಿಸುವಂತಹ ಮತ್ತೊಂದು ಪೈಶಾಚಿಕ ಕೃತ್ಯ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಉಘೈತಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇವಾಲಿ ಗ್ರಾಮದಲ್ಲಿ ಜರುಗಿತ್ತು. ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್ನಿಂದ ಹೊಡೆದು ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ದೇಶಾದ್ಯಂತ ಬಹಳ ಸಂಚಲನಕ್ಕೆ ಕಾರಣವಾಗಿತ್ತು . ಪ್ರಮುಖ ಆರೋಪಿ ಸತ್ಯನಾರಾಯಣನನ್ನು ಪೊಲೀಸರು ಬಂಧಿಸಿದ್ದಾರೆ.ವರದಿಗಳ ಪ್ರಕಾರ ಮಹಿಳೆಯು ಭಾನುವಾರ ಮನೆಯ ಸಮೀಪದ ದೇವಸ್ಥಾನವೊಂದಕ್ಕೆ ತೆರಳಿದ್ದು ಮನೆಗೆ ವಾಪಾಸ್ ಬಂದಿರಲಿಲ್ಲ.ನಂತರ ರಾತ್ರಿ ಮಹಿಳೆಯ ಶವ ಮನೆಯ ಹೊರಗೆ ಪತ್ತೆಯಾಗಿತ್ತು. ಮೃತ ಮಹಿಳಾ ಶವವನ್ನು ಮಹಿಳಾ ವೈದ್ಯರು ಸೇರಿದಂತೆ ಮೂವರು ವೈದ್ಯರ ತಜ್ಞರ ತಂಡ ಮರಣೋತ್ತರ ಪರೀಕ್ಷೆ ನಡೆಸಿದ್ದು, ದುಷ್ಕರ್ಮಿಗಳಿಂದ ಖಾಸಗಿ ಅಂಗಕ್ಕೆ ಹಾನಿ ಯಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.