ಅಂತರರಾಷ್ಟ್ರೀಯ

ಕ್ಯಾಪಿಟಲ್ ಗಲಭೆ, ಡೊನಾಲ್ಡ್ ಟ್ರಂಪ್, ಬೆಂಬಲಿಗರ ನಡೆಗೆ ಖಂಡನೆ

ಕ್ಯಾಪಿಟಲ್ ಗಲಭೆ, ಡೊನಾಲ್ಡ್ ಟ್ರಂಪ್,  ಬೆಂಬಲಿಗರ ನಡೆಗೆ  ಖಂಡನೆ

ಲಂಡನ್, ಜ 8:  ಚುನಾವಣಾ ಸಂಬಂಧ  ಕ್ಯಾಪಿಟಲ್ ಗಲಭೆ ಪ್ರಚೋದಿಸಿದ್ದಕ್ಕಾಗಿ ಇಂಗ್ಲೆಂಡ್  ಪ್ರಧಾನಿ ಬೋರಿಸ್ ಜಾನ್ಸನ್ ಡೊನಾಲ್ಡ್ ಟ್ರಂಪ್, ಹಾಗೂ ಬೆಂಬಲಿಗರ  ಹಿಂಸಾಚಾರದ ಘಟನೆಯನ್ನು  ಬಲವಾಗಿ ಖಂಡಿಸಿದ್ದಾರೆ .ಅಧ್ಯಕ್ಷರ ಕ್ರಮಗಳು. ಹಾಗೂ  ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸುವ ಪ್ರಯತ್ನದಲ್ಲಿ ಟ್ರಂಪ್ ಬೆಂಬಲಿಗರು  ಕ್ಯಾಪಿಟಲ್ ಹಿಲ್ ಕಟ್ಟಡಕ್ಕೆ ನುಗ್ಗಿ ನಾಲ್ಕು ಧಾಂದಲೆ ನಡೆಸಿರುವುದು ರಾಜಕೀಯದಲ್ಲಿ  ಒಳ್ಳೆಯ ಬೆಳವಣಿಗೆಯಲ್ಲ  ಎಂದು ಅವರು ಹೇಳಿದರು. ಹಿಂಸಾಚಾರದ ಕಾರಣ ನಾಲ್ವರು ಮೃತಪಟ್ಟಿದ್ದಾರೆ ಕ್ಯಾಪಿಟಲ್ ಹಿಲ್ ನಲ್ಲಿನ ಘಟನೆಗಳು  ನಾಚಿಕೆಗೇಡು ಮತ್ತು ಶಾಂತಿಯುತ ಮತ್ತು ನ್ಯಾಯಬದ್ಧವಾಗಿ ಅಧಿಕಾರ ವರ್ಗಾವಣೆ ಮಾಡುವಂತೆ ಅವರು ಒತ್ತಿ  ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು  , ಅಧ್ಯಕ್ಷ-ಚುನಾಯಿತ ಬಿಡೆನ್ ಗೆಲುವು  ದೃಡಿಕರಣವನ್ನು ಅವರು ಸ್ವಾಗತಿಸಿದ್ದಾರೆ. ಇದರ  ಪರಿಣಾಮ ಪ್ರಜಾಪ್ರಭುತ್ವ ಮೇಲುಗೈ ಸಾಧಿಸಿದೆ  ಚುನಾವಣೆಯಲ್ಲಿ ವ್ಯಾಪಕ  ವಂಚನೆ ನಡೆದಿದೆ ಫಲಿತಾಂಶವನ್ನು ಒಪ್ಪಿಕೊಳ್ಳುವುದಿಲ್ಲ ಪದೆ, ಪದೇ,  ಆಧಾರರಹಿತ ಹೇಳಿಕೆಗಳನ್ನು ಟ್ರಂಪ್ ನೀಡಿ ತಮ್ಮ  ಬೆಂಬಲಿಗರನ್ನು  ದಾಳಿ, ಆಶಾಂತಿಗೆ ಪ್ರಚೋದಿಸಿದ್ದಾರೆ ಎಂದೂ ಅವರು ಅಪಾದಿಸಿದ್ದಾರೆ. 


ಸುದ್ದಿ ಓದಿ