ವಿಶ್ವದಲ್ಲಿ ಮೊಟ್ಟ ಮೊದಲು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಸಾವು..!
ಲಂಡನ್, ಮೇ 26: ಪ್ರಪಂಚದಲ್ಲಿಯೇ ಮೊಟ್ಟಮೊದಲ ಬಾರಿ ಕೊರೊನಾ ನಿರೋಧಕ ಲಸಿಕೆ ಹಾಕಿಸಿಕೊಂಡಿದ್ದ ವ್ಯಕ್ತಿ ಎಂಬ ಇತಿಹಾಸ ಸೃಷ್ಟಿಸಿದ್ದ ಬ್ರಿಟನ್ ದೇಶದ ವಿಲಿಯಂ ಷೇಕ್ಸ್‌ಪಿಯರ್ (81) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.ಕಳೆದ ವರ್ಷ ಡಿಸೆಂಬರ್ 8 ರಂದು, ಕೋವಿಡ್ -19 ಲಸಿಕೆ ಪಡೆದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಶೇಕ್ಸ್‌ಪಿಯರ್ ಪಾತ್ರರಾಗಿದ್ದರು.ಯೂನಿವರ್ಸಿಟಿ ಆಸ್ಪತ್ರೆ ಕೋವೆಂಟ್ರಿ ಅಂಡ್ ವಾರ್ವಿಕ್‌ಶೈರ್‌ನಲ್ಲಿ ಅವರು ಜರ್ಮನಿಗೆ ಸೇರಿದ ಬಯೋಎನ್‌ಟೆಕ್, ಅಮೆರಿಕಾ ಔಷಧ ಸಂಸ್ಥೆ ಫಿಜರ್ ಜಂಟಿಯಾಗಿ ಅಭಿವೃದ್ದಿ ಪಡಿಸಿದ್ದ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಅನಾರೋಗ್ಯ ಸಮಸ್ಯೆಗಳಿಂದ ಇದೇ ಆಸ್ಪತ್ರೆಗೆ ಸೇರಿದ್ದ ಷೇಕ್ಸ್‌ಪಿಯರ್ ಈ ತಿಂಗಳ 20 ರಂದು ಮೃತಪಟ್ಟರು ಎಂದು ಅವರ ಸ್ನೇಹಿತ ಜೈನ್ ಇನ್ನೆಸ್ ತಿಳಿಸಿದ್ದಾರೆ. ಇದೇ ಆಸ್ಪತ್ರೆಯಲ್ಲಿ ಮಾರ್ಗರೇಟ್ ಕೀನನ್ (91) ಎಂಬುವವರು ಕೊರೊನಾ ಲಸಿಕೆ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.